ವರದಿಗಾರರು :
ಪವನ್ ಕುಮಾರ್ ||
ಸ್ಥಳ :
ಬೆಂಗಳೂರು.
ವರದಿ ದಿನಾಂಕ :
11-11-2025
ಜನತಾದಳ (ಎಸ್) ಕೋರ್ ಕಮಿಟಿ ಪುನಾರಚನೆ – ಎಂ. ಕೃಷ್ಣಾರೆಡ್ಡಿ ಅಧ್ಯಕ್ಷ
ಬೆಂಗಳೂರು, ನ.10 – ಜನತಾದಳ (ಎಸ್) ಪಕ್ಷದ ಸಂಘಟನೆ ಬಲವರ್ಧನೆಗಾಗಿ ಪ್ರಮುಖರ ಸಮಿತಿ (ಕೋರ್ ಕಮಿಟಿ) ಪುನಾರಚನೆ ಮಾಡಲಾಗಿದೆ.
ಹಿರಿಯ ನಾಯಕ ಹಾಗೂ ಮಾಜಿ ಉಪ ಸ್ಪೀಕರ್ ಎಂ. ಕೃಷ್ಣಾರೆಡ್ಡಿ ಅವರನ್ನು ನೂತನ ಅಧ್ಯಕ್ಷರಾಗಿ ಮತ್ತು ಹಿರಿಯ ನಾಯಕ, ಶಾಸಕ ಎ. ಮಂಜು ಅವರನ್ನು ಸಂಚಾಲಕರಾಗಿ ನೇಮಕ ಮಾಡಲಾಗಿದೆ. ಒಟ್ಟು 20 ಸದಸ್ಯರ ಸಮಿತಿ ರಚಿಸಲಾಗಿದೆ.
ಪಕ್ಷದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ನೂತನ ನೇತೃತ್ವಕ್ಕೆ ಶುಭಾಶಯಗಳನ್ನು ತಿಳಿಸಿ, “ಹೊಸ ತಂಡದ ಮೂಲಕ ಪಕ್ಷ ಮತ್ತಷ್ಟು ಸಂಘಟಿತವಾಗಿ ಬೆಳೆಯಲಿ” ಎಂದು ಹೇಳಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
