ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ !

ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ || ಸ್ಥಳ : ಬೆಂಗಳೂರು
ವರದಿ ದಿನಾಂಕ : 06-03-2025

ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ !

ದಾವಣಗೆರೆ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಸೇರಿದಂತೆ ಆಯಾಯ ವಿದ್ಯುತ್ ಕಂಪನಿಗಳು ಇದೀಗ ಹೊಸ ಡಿಜಿಟಲ್ ವಿದ್ಯುತ್ ಮೀಟರ್ ಜಾರಿ ಮಾಡಲು ಮುಂದಾಗಿವೆ. ಈ ಮೀಟರ್ ಹಳೇ ಮೀಟರ್​ಗಿಂತ ಸ್ವಲ್ಪ ಡಿಫರೆಂಟ್ ಎಂಬಂತೆ ಹಣ ಭರಿಸಿದ್ರೆ ಮಾತ್ರ ಜನರಿಗೆ ವಿದ್ಯುತ್ ಲಭ್ಯವಾಗಲಿದೆ.

ಮೊಬೈಲ್​ಗೆ ಯಾವ ರೀತಿ ಹಣ ಭರಿಸುತ್ತೇವೋ ಅದೇ ರೀತಿ ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ಮಾದರಿಯಲ್ಲಿ ಹಣ ಭರಿಸಿದ್ರೆ ಮಾತ್ರ ವಿದ್ಯುತ್ ಪೂರೈಕೆ ಆಗಲಿದೆ. ಈಗಾಗಲೇ ಡಿಜಿಟಲ್ ಮೀಟರ್​ಗಳು ದಾವಣಗೆರೆ ಬೆಸ್ಕಾಂ ಅಧಿಕಾರಿಗಳ ಕೈಸೇರಿವೆ.

ಹೌದು, ರಾಜ್ಯದ ಎಲ್ಲಾ ಎಸ್ಕಾಂಗಳಲ್ಲಿ ಯಾವುದೇ ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಬಂದರೂ ಸ್ಮಾರ್ಟ್ ಮೀಟರ್ ಕಡ್ಡಾಯವಾಗಿ ಅಳವಡಿಸಬೇಕು ಎಂಬ ಕೆಇಆರ್‌ಸಿಯ ಸೂಚನೆ ಬಂದಿದೆ. ಹಾಲಿ ಇರುವ ಹಳೆಯ ಮೀಟರ್ ತೆಗೆದು ಸ್ಮಾರ್ಟ್ ಮೀಟರ್ ಅಳವಡಿಸಲು ಹಂತ ಹಂತವಾಗಿ ದಾವಣಗೆರೆ ಬೆಸ್ಕಾಂ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಆದರೆ, ಸ್ಮಾರ್ಟ್ ಮೀಟರ್ ಅಳವಡಿಕೆ ಬಗ್ಗೆ ಬಡ ಜನರು ಕೊಂಚ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.‌ ನಗರ ಪ್ರದೇಶಗಳಲ್ಲಿ ಫೆ.15ರಿಂದ ಸ್ಮಾರ್ಟ್ ಮೀಟರ್ ಅಳವಡಿಕೆ ಆರಂಭ ಆಗಿದ್ದು, ಇಲ್ಲಿತನಕ ದಾವಣಗೆರೆಯಲ್ಲಿ ಯಾವೊಬ್ಬರೂ ಡಿಜಿಟಲ್ ಮೀಟರ್ ಅಳವಡಿಸಲು ಮುಂದಾಗಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.

ಸ್ಮಾರ್ಟ್ ಮೀಟರ್‌ಗಳ ಬೆಲೆ ದುಬಾರಿ ಇದೆ. ಸಿಂಗಲ್ ಫೇಸ್ ಮೀಟರ್ ಬೆಲೆ 4,998 ರೂ., ಮೂರು ಫೇಸ್ ಮೀಟರ್ ಬೆಲೆ 8870 ರೂ. ಹಾಗು ಎಲ್‌ಟಿ ಸಿಟಿ ಮೂರು ಫೇಸ್ ಮೀಟರ್ ಬೆಲೆ 28,080 ರೂ. ಇರಲಿದೆ. 100 ರೂ.ನಿಂದ ಆರಂಭ ಆಗುವ ಮೀಟರ್‌ಗಳ ಬೆಲೆ 5 ಸಾವಿರ ರೂ. ವರೆಗೆ ಇರುತ್ತದೆ‌ ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ಹೊಸ ಮೀಟ‌ರ್ ಅಳವಡಿಕೆ ಬಳಿಕ ನಿಮಗೆ ಎಷ್ಟು ಯುನಿಟ್ ವಿದ್ಯುತ್ ಬೇಕೆಂಬುದರ ಆಧಾರದಲ್ಲಿ ಸ್ಮಾರ್ಟ್ ಮೀಟರ್ ಚಾರ್ಜ್ ಮಾಡಿಸಿಕೊಳ್ಳಬೇಕು. ನೀವು ಹಾಕಿಕೊಂಡ ಕರೆನ್ಸಿ ಆಧಾರದಲ್ಲಿ ವಿದ್ಯುತ್ ಪೂರೈಕೆ ಆಗಲಿದೆ. ಇನ್ನು ಪೋಸ್ಟ್ ಪೇಯ್ಡ್ ವಿಷಯ ಬಂದರೆ ತಿಂಗಳುಪೂರ್ತಿ ನೀವು ಬಳಸಿದ ಯುನಿಟ್ ಆಧಾರದಲ್ಲಿ ಬಿಲ್ ಬರಲಿದೆ. ಬಿಲ್ ಬಂದ 7 ದಿನದ ಒಳಗೆ ಹಣ ಪಾವತಿ ಮಾಡಬೇಕು. ನಿಗದಿತ ಅವಧಿಯಲ್ಲಿ ಬಿಲ್ ಪಾವತಿ ಆಗದೇ ಇದ್ದರೆ ಸ್ಮಾರ್ಟ್ ಮೀಟರ್ ವಿದ್ಯುತ್ ಪೂರೈಕೆ ನಿಲ್ಲಿಸುತ್ತದೆ.

ಖಾಸಗಿ ಸಭೆ ಸಮಾರಂಭಗಳಿಗೆ ವಿದ್ಯುತ್ ಸಂಪರ್ಕ ದುಬಾರಿ: ಇನ್ನು ಗಣೇಶ ಹಬ್ಬ, ನಾಟಕ, ರಾಜಕೀಯ ಸಮಾವೇಶ ಹೀಗೆ ಖಾಸಗಿ ಸಭೆ ಸಮಾರಂಭಗಳಿಗೆ ತೆಗೆದುಕೊಳ್ಳುವ ತಾತ್ಕಾಲಿಕ ವಿದ್ಯುತ್ ಸಂಪರ್ಕ ಇನ್ನು ಮುಂದೆ ಬಲು ದುಬಾರಿ ಆಗಲಿದೆ. ಮೊದಲೆಲ್ಲಾ ಗರಿಷ್ಠ ಅಂದರೆ 5 ಸಾವಿರ ರೂ.ಗೆ ಎಲ್ಲವೂ ಮುಗಿದುಹೋಗುತ್ತಿತ್ತು. ಆದರೆ, ಇನ್ನು ಮುಂದೆ ಖಾಸಗಿಯಾಗಿ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಕನಿಷ್ಠ 7-8 ಸಾವಿರ ರೂ. ವೆಚ್ಚ ಆಗಲಿದೆ ಎಂದು ಊಹಿಸಲಾಗಿದೆ. ಬಳಕೆ ಮಾಡುವ ವಿದ್ಯುತ್ ಯುನಿಟ್ ಆಧಾರದಲ್ಲಿ ವಾಣಿಜ್ಯ ಬೆಲೆಯಲ್ಲಿ ಮೊದಲೇ ಹಣ ಪಾವತಿಸಬೇಕೆಂಬುದು ಬೆಸ್ಕಾಂ ಅಧಿಕಾರಿಗಳ ವಾದ ಆಗಿದೆ.

ವಿದ್ಯುತ್ ಬೇಕಾದವರು ಯುಪಿಐ ಮೂಲಕ, ಇಲ್ಲ ಬೆಸ್ಕಾಂ ಆ್ಯಪ್ ಮೂಲಕ ರಿಚಾರ್ಜ್ ಮಾಡಬಹುದಾಗಿದೆ. ಫೆ.15 ರ ನಂತರ ಬರುತ್ತಿರುವ ಅರ್ಜಿಗಳಿಗೆ ನೂತನ ಸ್ಮಾರ್ಟ್ ಮೀಟರ್ ಕೊಡಲಾಗುತ್ತಿದೆ. ಮೊಬೈಲ್​ಗೆ ಪ್ರೀಪೇಯ್ಡ್, ಪೋಸ್ಟ್ ಪೇಯ್ಡ್​ ರೀತಿ ಮೊತ್ತ ಭರಿಸಿದಂತೆ ಈ ಮೀಟರ್​ಗಳಿಗೆ ಹಣ ಭರಿಸಿದ್ರೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಹಣ ಭರಿಸಿದ್ರೆ ಮಾತ್ರ ವಿದ್ಯುತ್ ದೊರೆಯಲಿದೆ. ಹಣ ಖಾಲಿಯಾದರೆ ವಿದ್ಯುತ್ ಕಡಿತ ಆಗಲಿದೆ" ಎಂದು ತಿಪ್ಪೇಸ್ವಾಮಿ ತಿಳಿಸಿದರು.

: "ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ನಿಮ್ಮ ಖಾತೆಯಲ್ಲಿ ಎಷ್ಟು ಮೊತ್ತ ಇದೆ. ಎಷ್ಟು ಕಡಿತ ಆಗಿದೆ. ಎಷ್ಟು ಯುನಿಟ್ ವಿದ್ಯುತ್ ಖರ್ಚಾಗಿದೆ. ಬ್ಯಾಲೆನ್ಸ್ ಎಷ್ಟಿದೆ ಎಂದು ಸಂದೇಶ ಮೊಬೈಲ್​ಗೆ ಬರಲಿದೆ.‌ ರಾತ್ರಿ ಹಣ ಖಾಲಿ ಅದರೆ ವಿದ್ಯುತ್ ಕಡಿತ ಆಗಲ್ಲ, ಬೆಳಗ್ಗೆ ಹಣ ಭರಿಸಿದ್ರೆ ಮತ್ತೆ ವಿದ್ಯುತ್ ಚಾಲ್ತಿಯಾಗಲಿದೆ. ದಾವಣಗೆರೆಯ ಬೆಸ್ಕಾಂ ಕಚೇರಿಯಲ್ಲಿ ಈ ಡಿಜಿಟಲ್ ಮೀಟರ್ ದೊರೆಯಲಿದೆ. ಹಳೇ ಮೀಟರ್​ಗಳಿಗೆ ಇದು ಅನ್ವಯ ಆಗಲ್ಲ, ಹೊಸದಾಗಿ ಮೀಟರ್ ಬೇಕೆಂದು ಅರ್ಜಿ ಸಲ್ಲಿಸುವವರಿಗೆ ಈ ಮೀಟರ್ ದೊರೆಯಲಿದೆ. ಹಂತ ಹಂತವಾಗಿ ಹಳೇ ಮೀಟರ್​ಗಳಿಗೂ ಅನ್ವಯ ಮಾಡಲಾಗುವುದು, ಮೀಟರ್​ಗೆ ಮಿನಿಮಮ್ 100 ರೂಪಾಯಿ ಭರಿಸಬೇಕಾಗುತ್ತದೆ" ಎಂದರು.

"ಸ್ಮಾರ್ಟ್ ಮೀಟರ್‌ಗಳು ಬಂದಿವೆ, ಹೊಸದಾಗಿ ಅರ್ಜಿ ಕೊಡುವವರಿಗೆ ಇದು ಅನ್ವಯ ಆಗಲಿದೆ. ಬೆಸ್ಕಾಂ ಅವರು ಮೊದಲು ಸರ್ಕಾರಿ ಕಚೇರಿ, ಕಟ್ಟಡಗಳಿಗೆ, ಕಮರ್ಷಿಯಲ್ ಕಟ್ಟಡಗಳಿಗೆ ವಿದ್ಯುತ್ ಮೀಟರ್ ಅಳವಡಿಸಬೇಕಿತ್ತು. ಮೂರು ಸಾವಿರ ಇದ್ದ ಮೀಟರ್ ಬೆಲೆ ಐದು ಸಾವಿರ ಆಗಿದೆ. ಐದು ಸಾವಿರ ಇದ್ದ ಮೀಟರ್ ಎಂಟು ಸಾವಿರ ಆಗಿದೆ. ಬೆಸ್ಕಾಂ ಅವರು ಬಡವರಿಗೆ ದರ ಕಡಿಮೆ ಮಾಡುವ ಯೋಚನೆ ಮಾಡಬೇಕು. ಇಷ್ಟು ದಿನ ತಿಂಗಳಿಗೊಮ್ಮೆ ಬಿಲ್ ಸಂದಾಯ ಮಾಡುತ್ತಿದ್ದರು. ಇದೀಗ ಎಷ್ಟು ಹಣ ಭರಿಸುತ್ತಾರೋ ಅಷ್ಟು ವಿದ್ಯುತ್ ಸಂದಾಯ ಆಗಲಿದೆ. ಹಣ ಖಾಲಿ ಅದರೆ ವಿದ್ಯುತ್ ಕಡಿತ ಆಗಲಿದೆ‌. ವಿದ್ಯುತ್ ರಾತ್ರಿ ಏಕಾಏಕಿ ಕಡಿತ ಆಗದೆ ಇರುವುದು ಖುಷಿ ಸಂಗತಿ" ಎಂದು ಸ್ಥಳೀಯ ಗಿರೀಶ್ ದೇವರಮನೆ ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ರವರ 69ನೇ ಮಹಾ ಪರಿನಿರ್ವಾಣ ದಿನ

ಒಟ್ಟು ಓದುಗರ ಸಂಖ್ಯೆ : 331+

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಬಳಕೆ ; ಸುಧಾ ಮೂರ್ತಿ ಕಳವಳ

ಒಟ್ಟು ಓದುಗರ ಸಂಖ್ಯೆ : 920+

ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ: ವೈದ್ಯ ಮಂಜುನಾಥ್.

ಒಟ್ಟು ಓದುಗರ ಸಂಖ್ಯೆ : 962+

ವೈಟ್‌ಫೀಲ್ಡ್‌ನ ಬೆಸ್ಕಾಂ ಉಪವಿಭಾಗ ಕಚೇರಿ ಉದ್ಘಾಟಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್.

ಒಟ್ಟು ಓದುಗರ ಸಂಖ್ಯೆ : 962+

ಭಾರತದ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ ಮೋದಿ.

ಒಟ್ಟು ಓದುಗರ ಸಂಖ್ಯೆ : 985+

ಪ್ರಸಕ್ತ ವಿದ್ಯಮಾನದ ಮಹತ್ತರ ಬೆಳವಣಿ,ಭಾರತ ಮತ್ತು ರಷ್ಯಾ ನಡುವೆ ಮಹತ್ತರ ಒಪ್ಪಂದ

ಒಟ್ಟು ಓದುಗರ ಸಂಖ್ಯೆ : 1148+

ದುರ್ಗಮ ರಸ್ತೆ ಇದು ಹೇಗೆ ಓಡಾಡೋದು

ಒಟ್ಟು ಓದುಗರ ಸಂಖ್ಯೆ : 1175+

ಸಾಂಕ್ರಾಮಿಕವಲ್ಲದ ರೋಗಗಳ ಕುರಿತ ಮಾಹಿತಿ ನೀಡಿ: ಜೆಪಿ ನಡ್ಡಾಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

ಒಟ್ಟು ಓದುಗರ ಸಂಖ್ಯೆ : 1203+

ಕಬಡ್ಡಿ, ಖೋಖೋ, ವಾಲಿಬಾಲ್: ಹಾಸನ ತಂಡ ಪ್ರಥಮ ೨೮ನೇ ರಾಜ್ಯ ಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಯಶಸ್ವಿ: ಚುಂಚಶ್ರೀ

ಒಟ್ಟು ಓದುಗರ ಸಂಖ್ಯೆ : 3065+

ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಪ್ಪನಹಳ್ಳಿ ಗ್ರಾಮದಲ್ಲಿ ನೂತನ ಸರ್ಕಾರಿ ನ್ಯಾಯಾ ಬೆಲೆ ಅಂಗಡಿ ಉದ

ಒಟ್ಟು ಓದುಗರ ಸಂಖ್ಯೆ : 3261+

ರಷ್ಯಾ ಅಧ್ಯಕ್ಷ ಮತ್ತು ಭದ್ರತೆ

ಒಟ್ಟು ಓದುಗರ ಸಂಖ್ಯೆ : 3396+

ರಷ್ಯಾ ಅಧ್ಯಕ್ಷ ಮತ್ತು ಭದ್ರತೆ

ಒಟ್ಟು ಓದುಗರ ಸಂಖ್ಯೆ : 3390+

ಬೀದರದಲ್ಲಿ ಡಿಸೆಂಬರ್ 7 ರಂದು ಮಹಿಳೆಯರಿಗಾಗಿ ಕುರ್‍ಆನ್ ಪ್ರವಚನ

ಒಟ್ಟು ಓದುಗರ ಸಂಖ್ಯೆ : 3476+

ದ್ವೇಷ ಭಾಷಣಕ್ಕೆ 7 ವರ್ಷ ಜೈಲು: ಮಸೂದೆಗೆ ಸಚಿವ ಸಂಪುಟದ ಅನುಮೋದನೆ

ಒಟ್ಟು ಓದುಗರ ಸಂಖ್ಯೆ : 3485+

ಯಲಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅಧ್ಯಕ್ಷ–ಉಪಾಧ್ಯಕ್ಷರ ಅವಿರೋಧ ಚುನಾವಣೆ

ಒಟ್ಟು ಓದುಗರ ಸಂಖ್ಯೆ : 3492+

ಯಲಿಯೂರು ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 3532+

ಅನಿಸಿಕೆ ಇದು ನನ್ನ ಮನದಾಳದ ಮಾತು

ಒಟ್ಟು ಓದುಗರ ಸಂಖ್ಯೆ : 3555+

ಗೃಹಲಕ್ಷ್ಮಿಯರಿಗೆ ರೂ. 30 ಸಾವಿರದಿಂದ 3 ಲಕ್ಷದವರೆಗೆ ಪರ್ಸನಲ್ ಲೋನ್ ಭಾಗ್ಯ

ಒಟ್ಟು ಓದುಗರ ಸಂಖ್ಯೆ : 4025+

ಭಾರತ ರಷ್ಯಾ 23 ನೇ ಶೃಂಗ ಸಭೆ. ಭರತನಾಟ್ಯ ಪ್ರದರ್ಶನದ ಮೂಲಕ ರಷ್ಯಾಧೀಶರಿಗೆ ಸ್ವಾಗತ.

ಒಟ್ಟು ಓದುಗರ ಸಂಖ್ಯೆ : 4048+

ಮರೆಯದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ.. ಡಿ.21 ರಿಂದ 24ರವರೆಗೆ ಅವಕಾಶ…1.40 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ

ಒಟ್ಟು ಓದುಗರ ಸಂಖ್ಯೆ : 4107+

ಜಿ.ಪಿ.ರಾಜರತ್ನಮ್ ಜನುಮದಿನ

ಒಟ್ಟು ಓದುಗರ ಸಂಖ್ಯೆ : 4120+

ಪದ್ಮಶ್ರೀ ಪುರಸೃತ ವೆಂಕಣ್ಣ ಸುಗತೆಕರ್ ಆರೋ್ಗ್ಯ ವಿಚಾರಿಸಿದ ಬಿಜೆಪಿ ಮುಖಂಡ ಡಾ. ಶೇಖರ ಮಾನೆ

ಒಟ್ಟು ಓದುಗರ ಸಂಖ್ಯೆ : 6204+

ಬೆಂಗಳೂರಿನಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮೇಳ

ಒಟ್ಟು ಓದುಗರ ಸಂಖ್ಯೆ : 6213+

ನಾಗೂರಾ ಯುವಕ ಸೈನ್ಯಕ್ಕೆ ಭರ್ತಿ : ಸನ್ಮಾನ

ಒಟ್ಟು ಓದುಗರ ಸಂಖ್ಯೆ : 6341+

ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ

ಒಟ್ಟು ಓದುಗರ ಸಂಖ್ಯೆ : 6343+

ಇಂದು ಸಂಜೆ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಆಗಮನ

ಒಟ್ಟು ಓದುಗರ ಸಂಖ್ಯೆ : 6776+

ಡಿಸೆಂಬರ್ 4 ಭಾರತೀಯ ನೌಕಾಪಡೆಯ ದಿನ

ಒಟ್ಟು ಓದುಗರ ಸಂಖ್ಯೆ : 6821+

ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ!

ಒಟ್ಟು ಓದುಗರ ಸಂಖ್ಯೆ : 6895+

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ಧಿ

ಒಟ್ಟು ಓದುಗರ ಸಂಖ್ಯೆ : 6989+

ವಿಮಾನ ಸಂಚಾರದಲ್ಲಿ ವ್ಯತ್ಯಯ

ಒಟ್ಟು ಓದುಗರ ಸಂಖ್ಯೆ : 6998+

ಎ. ಪಿ. ಡಿ ಸಂಸ್ಥೆ ವತಿಯಿಂದ ಸರಕಾರಿ,ಅರೆಸರಕಾರಿ ಕಚೇರಿ ಅಡೆತಡೆ ಮುಕ್ತ ವಾತಾವರಣ ನಿರ್ಮಿಸಲು ಮನವಿ

ಒಟ್ಟು ಓದುಗರ ಸಂಖ್ಯೆ : 7044+

ಜಿಲ್ಲಾಡಳಿತ ಭವನದಲ್ಲಿ ವಿಶ್ವವಿಕಲಚೇತನರ ದಿನಾಚರಣೆ

ಒಟ್ಟು ಓದುಗರ ಸಂಖ್ಯೆ : 8935+

ಸುವಿದ್ಯಾ ನಿಧಿ ಮೂಲಕ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ

ಒಟ್ಟು ಓದುಗರ ಸಂಖ್ಯೆ : 9101+

ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆ ಪ್ರಕ್ರಿಯೇ ಸ್ತ್ರೀ ಶಕ್ತಿ

ಒಟ್ಟು ಓದುಗರ ಸಂಖ್ಯೆ : 9439+

ಚಳಿಗಾಲ ಮತ್ತು ಆರೋಗ್ಯ

ಒಟ್ಟು ಓದುಗರ ಸಂಖ್ಯೆ : 9626+

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಆಗ್ರಹ:

ಒಟ್ಟು ಓದುಗರ ಸಂಖ್ಯೆ : 9743+

ಹೊಸ ಅಯೋಧ್ಯ ಹುಲುಗಪ್ಪ ಟೀ ಪುಡಿ ಅವರಿಗೆ ಜಿಲ್ಲಾ ಸಮಿತಿಯಿಂದ ಸನ್ಮಾನ

ಒಟ್ಟು ಓದುಗರ ಸಂಖ್ಯೆ : 9788+

ಸಂಚಾರಿ ಸಾಥಿ ತಂತ್ರಾಶ..

ಒಟ್ಟು ಓದುಗರ ಸಂಖ್ಯೆ : 9769+

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 369 ವಾರ್ಡ್ ಗಳ ಅಧಿಕೃತ ಪಟ್ಟಿ ಬಿಡುಗಡೆ.

ಒಟ್ಟು ಓದುಗರ ಸಂಖ್ಯೆ : 9779+

ರಾಜ್ಯ ಕೈ ನಾಯಕರ ಉಪಹಾರ ಕೂಟ...ಬಿಜೆಪಿ ವ್ಯಂಗ್ಯ...

ಒಟ್ಟು ಓದುಗರ ಸಂಖ್ಯೆ : 9796+

ಮಧುಗಿರಿಯಲ್ಲಿ ಕಾರು ಪಲ್ಟಿ: ದಂಪತಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ

ಒಟ್ಟು ಓದುಗರ ಸಂಖ್ಯೆ : 12046+

ತುಮಕೂರು ತಾಲೂಕಿನ ಗ್ರಾಮಸ್ಥರಿಗೆ ಕಾನೂನು ಜಾಗೃತಿ

ಒಟ್ಟು ಓದುಗರ ಸಂಖ್ಯೆ : 12052+

ಇಂದಿರಾ ಆಹಾರ ಕಿಟ್ ಅನುಷ್ಠಾನಕ್ಕೆ ವೇಗ: ಸಿಎಂ ಸಿದ್ದರಾಮಯ್ಯ

ಒಟ್ಟು ಓದುಗರ ಸಂಖ್ಯೆ : 12074+

ಕರ್ನಾಟಕದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಮೋದಿ–ಎಚ್.ಡಿ.ಕೆ. ಮಾಸ್ಟರ್ ಪ್ಲಾನ್: ರಾಜಶೇಖರ್ ಜವಳೆ

ಒಟ್ಟು ಓದುಗರ ಸಂಖ್ಯೆ : 12094+

ಕಂಪ್ಯೂಟರ್ ಸಾಕ್ಷರತಾ ದಿನ.

ಒಟ್ಟು ಓದುಗರ ಸಂಖ್ಯೆ : 12149+

ಕಬ್ಬಡ್ಡಿಗೆ ಹೆಚ್ಚಿನ ಆದ್ಯತೆ ಅಗತ್ಯ: ಶಾಸಕ ಸಿಮೆಂಟ್ ಮಂಜು

ಒಟ್ಟು ಓದುಗರ ಸಂಖ್ಯೆ : 12329+

ಇಂದು ಡಿಸೆಂಬರ್ 2 ರಾಷ್ಟ್ರೀಯ ಪರಿಸರ ಮಾಲಿನ್ಯ ಜಾಗೃತಿ ದಿನ

ಒಟ್ಟು ಓದುಗರ ಸಂಖ್ಯೆ : 12337+

ಯುಪಿ ಸಂಸದನಿಗೆ ತಟ್ಟಿದ ಸಿಲಿಕಾನ್ ಸಿಟಿ ಸಂಚಾರ ದಟ್ಟಣೆ...

ಒಟ್ಟು ಓದುಗರ ಸಂಖ್ಯೆ : 12352+