ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
05-03-2025
ಸ್ಮಾರ್ಟ್ಫೋನ್ಗಳಿಗೆ 7 ವರ್ಷಗಳವರೆಗೆ ಓಎಸ್ !
ಬಾರ್ಸಿಲೋನಾದಲ್ಲಿ ನಡೆದ MWC (ಮೊಬೈಲ್ ವರ್ಲ್ಡ್ ಕಾಂಗ್ರೆಸ್) 2025 ಕಾರ್ಯಕ್ರಮದಲ್ಲಿ ಆನರ್ ಪ್ರಮುಖ ಘೋಷಣೆ ಮಾಡಿದೆ. ಆನರ್ ತನ್ನ ಹಾನರ್ ಮ್ಯಾಜಿಕ್ ಸೀರಿಸ್ 7 ವರ್ಷಗಳ ಕಾಲ ಆಂಡ್ರಾಯ್ಡ್ ಓಎಸ್ ಮತ್ತು ಸೆಕ್ಯೂರಿಟಿ ಅಪ್ಡೇಟ್ಸ್ ಒದಗಿಸುವುದಾಗಿ ಘೋಷಿಸಿದೆ. ಇದು ಆನರ್ ಮ್ಯಾಜಿಕ್ ಸೀರಿಸ್ ಸಾಧನ ಬಳಕೆದಾರರಿಗೆ ಇತ್ತೀಚಿನ ಎಐ ಫೀಚರ್ಸ್ ಒದಗಿಸುತ್ತದೆ. ಇದಲ್ಲದೆ ಎಕ್ಸ್ಟೆನ್ಡೆಡ್ ಸಪೋರ್ಟ್ ಜೊತೆ ಈ ಪ್ರಮುಖ ಸಾಧನಗಳು ದೀರ್ಘಕಾಲದವರೆಗೆ ಸೆಕ್ಯೂರ್ ಆಗಿ ಉಳಿಯುತ್ತವೆ.
ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ಆನರ್ ಸೋಮವಾರ ತನ್ನ ಪ್ರಮುಖ ಆನರ್ ಮ್ಯಾಜಿಕ್ ಸೀರಿಸ್ಗೆ ಏಳು ವರ್ಷಗಳ ಕಾಲ ಆಂಡ್ರಾಯ್ಡ್ ಓಎಸ್ ಮತ್ತು ಭದ್ರತಾ ಅಪ್ಡೇಟ್ಸ್ ಒದಗಿಸುವುದಾಗಿ ಘೋಷಿಸಿದ್ದು, ಇದನ್ನು ಯುರೋಪಿಯನ್ ಒಕ್ಕೂಟದ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗುವುದು. ಕಂಪನಿಯು ಈ ಕೊಡುಗೆಯನ್ನು ತನ್ನ ‘HONOR ALHPA PLAN’ಯ ಭಾಗವಾಗಿ ಘೋಷಿಸಿದೆ.
‘HONOR ALHPA PLAN’ ನಮ್ಮ ಭವಿಷ್ಯದ ಉತ್ಪನ್ನಗಳಿಗೆ ಗ್ರಾಹಕ-ಕೇಂದ್ರಿತ ವಿಧಾನದ ಮೇಲೆ ಬಲವಾದ ಒತ್ತು ನೀಡಿದೆ. ಗ್ರಾಹಕರ ಅಗತ್ಯಗಳನ್ನು ಪೂರೈಸಲು, ಈಗ ಮತ್ತು ಭವಿಷ್ಯದಲ್ಲಿ ಅವರ ನಿರೀಕ್ಷೆಗಳನ್ನು ಮೀರುವ ಸಾಧನಗಳು ಮತ್ತು ಸೇವೆಗಳನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಸಂದರ್ಭದಲ್ಲಿ ಕಂಪನಿಯು ಆನರ್ ಮ್ಯಾಜಿಕ್ ಸೀರಿಸ್ಗೆ 7 ವರ್ಷಗಳ ಆಂಡ್ರಾಯ್ಡ್ ಓಎಸ್ ಮತ್ತು ಭದ್ರತಾ ಅಪ್ಡೇಟ್ಸ್ ಒದಗಿಸಲು ನಿರ್ಧರಿಸಿದೆ. ಇದರಲ್ಲಿ ನಮ್ಮ ಪ್ರಮುಖ ಬಾರ್ ಫೋನ್ ಮತ್ತು ಫೋಲ್ಡಬಲ್ ಫೋನ್‌ಗಳು ಸೇರಿವೆ. ಈ ಕಮಿಟ್ಮೆಂಟ್ 'HONOR Magic7 Pro' ನೊಂದಿಗೆ ಪ್ರಾರಂಭವಾಗುತ್ತದೆ. ನಮ್ಮ ಗ್ರಾಹಕರಿಗೆ ಇದನ್ನು ಲಭ್ಯವಾಗುವಂತೆ ಮಾಡಲು ನಾವು ತುಂಬಾ ಸಂತೋಷಪಡುತ್ತೇವೆ ಎಂದು ಆನರ್ ಸಿಇಒ ಜೇಮ್ಸ್ ಲಿ ಹೇಳಿದರು.
'ಆನರ್ ಆಲ್ಫಾ ಪ್ಲಾನ್' ಎಂಬುದು ಹಾನರ್ ಅನ್ನು ಸ್ಮಾರ್ಟ್‌ಫೋನ್ ತಯಾರಕರಿಂದ ಪ್ರಮುಖ ಜಾಗತಿಕ ಎಐ ಡಿವೈಸ್ ಇಕೋಸಿಸ್ಟಮ್ ಕಂಪನಿಯಾಗಿ ಪರಿವರ್ತಿಸುವ ಹೊಸ ಕಾರ್ಪೊರೇಟ್ ತಂತ್ರವಾಗಿದೆ. ಈ ದೂರದೃಷ್ಟಿಯ ಮೂರು-ಹಂತದ ಯೋಜನೆಯು ಹೊಸ ಬುದ್ಧಿವಂತ ಜಗತ್ತನ್ನು ಆವಿಷ್ಕರಿಸಲು ಆನರ್ ತೆಗೆದುಕೊಳ್ಳುವ ದಿಟ್ಟ ಹೆಜ್ಜೆಗಳನ್ನು ವಿವರಿಸುತ್ತದೆ. ಇದು ಮಾನವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೊಳ್ಳುತ್ತದೆ.
ಅಷ್ಟೇ ಅಲ್ಲ ಈ ಎಕ್ಸ್ಟೆನ್ಡೆಡ್ ಸಪೋರ್ಟ್ ಸಾಧನಗಳ ಜೀವಿತಾವಧಿಯನ್ನು ವಿಸ್ತರಿಸುತ್ತದೆ ಮತ್ತು ಸುಸ್ಥಿರತೆಯ ಮಾನದಂಡಗಳಿಗೆ ಅನುಗುಣವಾಗಿ ಇ-ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಇದು ತನ್ನ ಬಳಕೆದಾರರಿಗೆ ಇತ್ತೀಚಿನ ಎಐ ತಂತ್ರಜ್ಞಾನದೊಂದಿಗೆ ಸುರಕ್ಷಿತ, ಉನ್ನತ-ಕಾರ್ಯಕ್ಷಮತೆಯ ಸಾಧನಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.
ಈ ಎಕ್ಸ್ಟೆನ್ಡೆಡ್ ಸಪೋರ್ಟ್ದಿಂದ ಪ್ರಯೋಜನ ಪಡೆಯುವ ಮೊದಲಿಗರು ಯೂರೋಪ ಒಕ್ಕೂಟನಲ್ಲಿರುವ HONOR Magic7 Pro ಬಳಕೆದಾರರು. ಕಂಪನಿಯು ಭವಿಷ್ಯದಲ್ಲಿ HONOR ಬಾರ್ ಫೋನ್‌ಗಳು ಮತ್ತು ಫೋಲ್ಡಬಲ್ ಫೋನ್‌ಗಳು ಸೇರಿದಂತೆ ಹೆಚ್ಚಿನ ಪ್ರಮುಖ ಮಾದರಿಗಳಿಗೆ ಈ ಎಕ್ಸ್ಟೆನ್ಡೆಡ್ ಸಪೋರ್ಟ್ ಅನ್ನು ಒದಗಿಸಲಿದೆ. ಆದರೂ ಈ ಎಕ್ಸ್ಟೆನ್ಡೆಡ್ ಸಪೋರ್ಟ್ ಹಾನರ್ ಮ್ಯಾಜಿಕ್ ಲೈಟ್ ಸೀರಿಸ್ ಸಾಧನಗಳಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಓದುಗರು ಗಮನಿಸಬೇಕಾದ ಸಂಗತಿ.
