ವರದಿಗಾರರು :
ಚೇತನ್ ರಾಜ್ ಟಿ ಎಸ್ ||
ಸ್ಥಳ :
ಹುಣಸೂರ್
ವರದಿ ದಿನಾಂಕ :
10-12-2025
ಅನಿಸಿಕೆ -
ಸರ್ಕಾರಿ ಕಛೇರಿ ಗಳಲ್ಲಿ ಭ್ರಷ್ಟಾಚಾರ ತಡೆಗಟ್ಟುವಿಕೆ ಕುರಿತಾಗಿ ಸರ್ಕಾರಿ ಕಛೇರಿಯ ಆಯಾ ಜಿಲ್ಲಾಧಿಕಾರಿಗಳವರ ಹಂತದಲ್ಲೂ ಕ್ಯೂ ಆರ್ ಕೋಡ್ ಗಳನ್ನು ಅಳವಡಿಸಬೇಕು ಎಂಬುದು ನನ್ನ ಆಶಯ.
ಏಕೆಂದರೆ ಸರ್ಕಾರಿ ಸೇವೆಸಲ್ಲಿಸುವ ,ಕಛೇರಿಗಳಲ್ಲಿ ಅಲೆಸುವಿಕೆ ಹಾಗೂ ಹಣದ ಬೇಡಿಕೆ ಬಗ್ಗೆ ಅಧಿಕಾರಿಗಳ ವರ್ತನೆಗೆ ಸಂಬಂಧಿಸಿದಂತೆ ನೇರವಾಗಿ ಕ್ಯೂ ಆರ್ ಕೋಡ್ ಮುಖಾಂತರ ಜಿಲ್ಲಾಧಿಕಾರಿಯವರಿಗೆ ಪೂರಕ ಧಾಖಲೆಗಳ ಮುಖಾಂತರ ಆನ್ಲೈನ್ ನಲ್ಲಿ ದೂರುಗಳನ್ನು ದಾಖಲಿಸುಸುವಂತಹ ಪರಿಣಾಮಕಾರಿ ಯೋಜನೆಯನ್ನು ಕರ್ನಾಟಕ ರಾಜ್ಯ ದ ಮಾನ್ಯ ಮುಖ್ಯಮಂತ್ರಿಗಳು ಜಾರಿಗೆ ತಂದರೆ ,ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗುತ್ತದೆಲ್ಲದೆ, ಸರ್ಕಾರಿ ಕಛೇರಿ ಗಳಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರುವಲ್ಲಿ ಸಹಕಾರಿ ಆಗುತ್ತೆ ಎಂಬುದು ನನ್ನ ಅನಿಸಿಕೆ.
ಸರ್ಕಾರಿ ಕಛೇರಿಗಳಲ್ಲಿ ಅಲೆದಾಡಿದರೂ ಕೆಲಸವಾಗದೇ ಇರುವ ಕೋಟ್ಯಂತರ ಜನರಿಗೆ ಇದು ಉಪಯೋಗ ಆಗಲಿದ್ದು ಇದರಿಂದ ಸರ್ಕಾರದ ಆಡಳಿತಕ್ಕೆ ಘನತೆ ,,ಗೌರವ ತಂದುಕೊಡುತ್ತದೆ. ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಯಿಂದ ಪ್ರತಿಯೊಬ್ಬ ನಾಗರೀಕನ ಅಭಿವೃದ್ಧಿ ಆಗುವಲ್ಲಿ ಎರಡು ಮಾತಿಲ್ಲ. ರಾಜ್ಯವು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿಎರಡು ಮಾತಿಲ್ಲ ಈ ರೀತಿ ಹೊಸ ವ್ಯವಸ್ಥೆಯೊಂದಿಗೆ ಭ್ರಷ್ಟಾಚಾರ ವಿರುದ್ದ ಸಾರ್ವಜನಿಕರೇ ಹೋರಾಟ ಮಾಡಲು ಒಂದು ಸುಗಮ ವೇದಿಕೆ ಸಿಗಲಿದೆ.
ಇದರಿಂದ ಸರ್ಕಾರಿ ಅಧಿಕಾರಿಗಳ ದರ್ಪಕ್ಜೆ ಕಡಿವಾಣಬಿದ್ದು ಅಧಿಕಾರಿಗಳು ಇದರಿಂದ ಸಾರ್ವಜನಿಕರಿಗೆ ಸುಗಮವಾಗಿ ಸರ್ಕಾರಿ ಕೆಲಸವನ್ನು ಮಾಡಿಕೊಡುವುದರ ಮೂಲಕವಾದರೂ ಆಡಳಿತ ವ್ಯವಸ್ಥೆ ಸ್ವಚ್ಛ ವಾಗುತ್ತದೆ
