ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
10-12-2025
ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸಃ ಡಾ. ವಿಶ್ವನಾಥ ಜಿ ಪಿ
ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ, ಪದ್ಮಶ್ರೀ ಪುರಸೃತೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ವೇದಿಕೆ ಮೂಲಕ ರಾಜ್ಯ ಮಟ್ಟದ ಗಡಿ ಕನ್ನಡಿಗರ ಉತ್ಸವ 70 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಅದೂರಿಯಾಗಿ ಜರುಗಿತು.
ಕರ್ನಾಟಕ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ವಿಶ್ವನಾಥ ಜಿ. ಪಿ. ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಿ, ಬೀದರ ಜಿಲ್ಲೆ 12 ಶತಮಾನದಲ್ಲಿ ಸಮಾನತೆಗಾಗಿ ಕನ್ನಡ ವಚನಸಾಹಿತ್ಯದ ಮೂಲಕ ಸಂಘರ್ಷ ಮಾಡಿದ ಭೂಮಿ, ಬಹು ಧರ್ಮಿಯರು. ಬಹು ಭಾಷೆ ಮಾತನಾಡುವ ಬೀದರ ಜನ ಕನ್ನಡ ಭಾಷೆ ಕಳಕಳಿ ಕಾಳಜಿ ಹೊಂದಿರುವ ಒಂದಾತ್ಮದ ಮನಸ್ಸಿನವರು
ಗಡಿಭಾಗದ ಸಮಸ್ಯೆ ಸವಾಲುಗಳು ಸರ್ಕಾರ ಪರಿಹರಿಸಬೇಕು, ಗಡಿ ಭಾಗದಲ್ಲಿ ಕನ್ನಡ ಕಟ್ಟುವ, ಸಾಹಿತ್ಯ ಸಂಸ್ಕೃತಿ ಉಳಿಸಿಬೆಳೆಸುವ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳಿಗೆ ಗಡಿ ಪ್ರಾಧಿಕಾರ ಅನುಧಾನ ನೀಡಬೇಕು ಎಂದರು.
ಅಧ್ಯಕ್ಷತೆ ಪಂಚಗ್ಯಾರAಟಿ ಸಮಿತಿ ಜಿಲ್ಲಾಧ್ಯಕ್ಷರಾದ ಅಮೃತರಾವ ಚಿಮಕೊಡ ವಹಿಸಿದರು
ಶ್ವ ಕನ್ನಡಿಗರ ಸಂಸ್ಥೆ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ಮಾತನಾಡಿ ಕಳೆದ ಮೂರು ವರ್ಷಗಳಿಂದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ನಾಡಿನ ಗಡಿಭಾಗದ ಸಂಘಸAಸ್ಥೆಗಳಿಗೆ ಅನುಧಾನ ನೀಡುವುದು ನಿಲ್ಲಿಸಿ ಹೊರರಾಜ್ಯದ ಸಂಘಸAಸ್ಥೆಗಳಿಗೆ ಐದರಿಂದ ಹತ್ತು ಲಕ್ಷದ ವರೆಗೆ ನೀಡಿದೆ. ಇದು ನಾಡಿನ ಗಡಿಭಾಗದ ಸಂಘ ಸಂಸ್ಥೆಗಳಿಗೆ ಮಾಡುತ್ತಿರುವ ಅಪಮಾನವಾಗಿದೆ
ಇದನ್ನು ಸರ್ಕಾರ ಸರಿಪಡಿಸಬೇಕು ಇಲ್ಲಾವಾದಲ್ಲಿ ಅನ್ಯಾಯಕ್ಕಾಗಿ ನ್ಯಾಯದ ಧ್ವನಿಯಾಗಿ ಕನ್ನಡಪರ ಸಂಘಟನೆಗಳು ಹೊರಾಟ ಮಾಡುತ್ತವೆ ಎಂದರು.
ಮುಖ್ಯ ಅತಿಥಿಗಳಾಗಿ ಅನ್ಸೂಲ ವಾಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ70 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿರೂಪಣೆಃ ಡಾ ಸುನೀತಾ ಬಿಕ್ಲೆ, .ವಂದನಾರ್ಪಣೆ ಸಾಹಿತಿ ಕುಪೇಂದ್ರ ಹೊಸಮನಿ ಮಾಡಿದರು.
