ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
13-12-2025
ಮಹಾಲಕ್ಷ್ಮಿ ಜಾತ್ರೆಗೆ ದೀಪೋತ್ಸವ ಮೆರುಗು
ಮಹಾಲಕ್ಷ್ಮಿ ಮಂದಿರ ಆವರಣದಲ್ಲಿ ಲಕ್ಷ ದೀಪೋತ್ಸವ ಅಂಗವಾಗಿ ಭಕ್ತರು ದೀಪ ಬೆಳಗಿಸಿದ ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ನೀವಾಸಿಗಳು
ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ಮಹಾಲಕ್ಷ್ಮಿ ಮಂದಿರದಲ್ಲಿ ಶುಕ್ರವಾರ ನಡೆದ ಜಾತ್ರಾ ಮಹೋತ್ಸವಕ್ಕೆ ಲಕ್ಷ ದೀಪೋತ್ಸವ ವಿಶೇಷ ಮೆರುಗು ನೀಡಿತು.ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಬಣ್ಣ ಬಣ್ಣದ ರಂಗೋಲಿಗಳ ಮೇಲೆ ಹಣತೆ ಇಟ್ಟು, ಎಣ್ಣೆ ಸುರಿದು ದೀಪಗಳನ್ನು ಬೆಳಗಿಸಿದರು.
ದೇಗುಲದ ಆವರಣದಲ್ಲಿ ಎಲ್ಲೆಡೆ ಸಾಲು ಸಾಲು ದೀಪಗಳೇ ಕಾಣಿಸಿದವು.ಮಹಾಲಕ್ಷ್ಮಿ ಮಂದಿರದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ದೀಪೋತ್ಸವ ನಡೆಯುತ್ತದೆ. ಗ್ರಾಮದ ಜನರು ದೇವಿಯ ಉಡಿ ತುಂಬಿ, ದೀಪ ಬೆಳಗಿಸಿ, ಭಕ್ತಿ ಸಮರ್ಪಿಸುತ್ತಾರೆ.ದೀಪೋತ್ಸವದಲ್ಲಿ ಗ್ರಾಮ ಹಾಗೂ ವಿವಿಧೆಡೆಯ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.
