ವರದಿಗಾರರು :
ಶಿವಲಿಂಗ ಕುಂಬಾರ ||
ಸ್ಥಳ :
ಜಮಖಂಡಿ
ವರದಿ ದಿನಾಂಕ :
13-12-2025
ದಸ್ತು ಬರಹಗಾರರ ಮುಷ್ಕರ
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಮಖಂಡಿ ತಾಲೂಕಾಡಳಿತ ಭವನದ ಆವರಣದಲ್ಲಿ ಕಳೆದ ಗುರುವಾರ ದಿನಾಂಕ 11/12/2025 ರಂದು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾವೇರಿ 1.0 , ಕಾವೇರಿ 2.0 , ಸದ್ಯ ಜಾರಿಗೆ ತರಲಿರುವ ಕಾವೇರಿ 3.0 ಪೇಪರಲೆಸ್ ನೋಂದಣಿಗೆ ಮುಂದಾಗಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ದಸ್ತು ಬರಹಗಾರರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲಾ ದತ್ತು ಬರಹಗಾರರ ಸಂಘದ ಅಧ್ಯಕ್ಷ ಬಸವರಾಜ್ ತೆಲಸಂಗ ಮಾತನಾಡುತ್ತಾ,, *ಹೊರ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲಿ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡುವುದು. *ಕರ್ನಾಟಕದ ಎಲ್ಲ ಪತ್ರ ಬರಹಗಾರರಿಗೆ ಏಕ ಮಾದರಿಯ ಗುರುತಿನ ಚೀಟಿಯನ್ನು ನೀಡುವುದು. *ಕಾವೇರಿ 2.0 ತಂತ್ರಾಂಶದಲ್ಲಿ ಆಗುತ್ತಿರುವ ತೊಂದರೆಗಳನ್ನು ಬೇಗನೆ ಸರಿಪಡಿಸಬೇಕು. *ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟುವುದು. *ದಸ್ತು ಬರಹಗಾರರಿಗೆ ಸೇವಾ ಭದ್ರತೆ ಒದಗಿಸುವದು. ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಬೇಗನೆ ಈಡೇರಿಸಬೇಕೆಂದು ಆಗ್ರಹಿಸಿದರು.
ಸರ್ಕಾರ ದತ್ತು ಬರಹಗಾರರ ಹುದ್ದೆ ತೆಗೆಯುವುದಿಲ್ಲ ಎಂದು ಹೇಳುತ್ತಾ ಪರೋಕ್ಷವಾಗಿ ದಸ್ತು ಬರಹಗಾರರ ಅಸ್ತಿತ್ವ ಇಲ್ಲದಂತೆ ಮಾಡುತ್ತಿದೆ, ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ. ಈ ಎಲ್ಲಾ ಅಂಶಗಳನ್ನು ಸರಕಾರಕ್ಕೆ ಮನವಿ ಮಾಡುವ ಸಲುವಾಗಿ ಸಂಘವು ಮತ್ತು ನಮ್ಮ ಒಕ್ಕೂಟದ ವತಿಯಿಂದ ಇದೆ ತಿಂಗಳು 16 ರಂದು ಬೆಳಗಾವಿ ಸುವರ್ಣಸೌಧದ ಮುಂದೆ ರಾಜ್ಯದ ದಸ್ತು ಬರಹಗಾರರು ಧರಣಿ ಸತ್ಯಾಗ್ರಹ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ. ದಸ್ತು ಬರಹಗಾರರ ಉಳಿವಿಗಾಗಿ ಉಗ್ರ ಹೋರಾಟ ಅನಿವಾರ್ಯ ಎಂದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ದಸ್ತೂ ಬರಹಗಾರರಾದ ಈರಣ್ಣ ಬಂಡಿಗಣಿ, ಶ್ರೀಶೈಲ ಗುರ್ಲಾಪುರ್, ಸುಭಾಷ್ ಬಂಡಿಗಣಿ, ಜಗದೀಶ್ ಅಥಣಿ, ಎಸ್ ಆರ್ ಸಿದ್ದಾರ, ದುಂಡಪ್ಪ ಚಿತ್ತಾಪುರ ಸಹಿತ ಮುಂತಾದವರು ಇದ್ದರು.
