ವರದಿಗಾರರು :
ಚೇತನ್ ರಾಜ್ ಟಿ ಎಸ್ ||
ಸ್ಥಳ :
Hunsur
ವರದಿ ದಿನಾಂಕ :
09-12-2025
ಹನಗೋಡು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶೌಚಾಲಯ ಅನೈರ್ಮಲ್ಯ ಸ್ವಚ್ಛಪಡಿಸುವಂತೆ ಸತ್ಯ ಎಂಎ ಎಸ್ ಫೌಂಡೇಶ�
ಹನಗೋಡು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶೌಚಾಲಯ ಅನೈರ್ಮಲ್ಯದಿಂದ ಕೂಡಿದ್ದು ಕೂಡಲೇ ಸ್ವಚ್ಛಪಡಿಸುವಂತೆ ಸತ್ಯ ಎಂಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಒತ್ತಾಯ.
ಈ ಬಗ್ಗೆ ಸತ್ಯಪ್ಪ ರವರು ಮಾತನಾಡಿ ಹುಣಸೂರು ತಾಲೂಕಿನಲ್ಲಿ ಹನಗೋಡು ಅತಿ ದೊಡ್ಡ ಗ್ರಾಮವಾಗಿದ್ದು ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶೌಚಾಲಯವಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ.
ಸುಮಾರು 20 ರಿಂದ 30 ಸಾವಿರದಷ್ಟು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ, ನಾಡಕಚೇರಿ ಕೃಷಿ ಇಲಾಖೆ ಮುಂತಾದ ಸರ್ಕಾರಿ ಕಚೇರಿಗಳಿದ್ದು ಪ್ರತಿದಿನ ಸಾವಿರಾರು ಮಂದಿ ಓಡಾಡುವ ಪ್ರದೇಶವಾಗಿರುತ್ತದೆ.
ಪ್ರತಿದಿನ ಓಡಾಡುವ ಜನ ಶೌಚಾಲಯದ ದುರವಸ್ಥೆಯನ್ನು ಕಂಡು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಾಗಲಿ, ಕೆ ಎಸ್ ಆರ್ ಟಿ ಸಿ ಘಟಕವಾಗಲಿ ಶೌಚಾಲಯ ನಿರ್ವಹಣೆಯ ಬಗ್ಗೆ ಒಂದಿಷ್ಟು ಕ್ರಮ ಕೈಗೊಂಡಿಲ್ಲ.
ಆದ್ದರಿಂದ ಈ ಕೂಡಲೇ ಹನಗೂಡು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಶುಚಿತ್ವಗೊಳಿಸಬೇಕು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದಲೇ ಇದನ್ನು ನಿರ್ವಹಿಸಬೇಕು. ಹಾಗೂ ಹೈ ಮಾಸ್ಕ್ ಲೈಟ್ ಅಳವಡಿಸಬೇಕು ಇನ್ನು ಎರಡು ದಿನದ ಒಳಗೆ ಶೌಚಾಲಯವನ್ನು ಸ್ವಚ್ಛ /ದುರಸ್ತಿಪಡಿಸದಿದ್ದಲ್ಲಿ ಹನಗೋಡು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರೊಂದಿಗೆ ಸತ್ಯ ಎಮ್ ಎ ಎಸ್ ಫೌಂಡೇಶನ್ ಪ್ರತಿಭಟನಾ ಧರಣಿ ಕೈಗೊಂಡು ಕಾರ್ಯನಿರ್ವಣಾಧಿಕಾರಿಗಳು ತಾಲೂಕು ಪಂಚಾಯಿತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯಿತಿ, ಸಾರಿಗೆ ಸಚಿವರು, ಘಟಕ ವ್ಯವಸ್ಥಾಪಕರು ಹುಣಸೂರು ಘಟಕ ಹಾಗೂ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಮೈಸೂರು ಗ್ರಾಮಾಂತರ ಘಟಕ ರವರುಗಳ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದ್ದಾರೆ.
