ವರದಿಗಾರರು :
ನಾ.ಅಶ್ವಥ್ ಕುಮಾರ್, ||
ಸ್ಥಳ :
Chamrajnagar
ವರದಿ ದಿನಾಂಕ :
09-12-2025
ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆ
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ದುರ್ಗಮ ರಸ್ತೆಯಲ್ಲಿ ಇಲಾಖಾ ವಾಹನದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ಪ್ರತಿನಿತ್ಯ 14 ಕಿಲೋ ಮೀಟರ್ ನಡೆದುಕೊಂಡು ಅಜ್ಜೀಪುರ, ರಾಮಾಪುರ ಹಾಗೂ ಇನ್ನಿತರ ಕಡೆ ವಿದ್ಯಾಬ್ಯಾಸ ಮಾಡಲು ತೆರಳುತ್ತಿದ್ದರು.
ರಸ್ತೆಯಂತೂ ಕಲ್ಲು ಮಣ್ಣಿನಿಂದ ಕೂಡಿದ್ದು, ದುರ್ಗಮವಾಗಿದ್ದರಿಂದ ಸಾರಿಗೆ ಬಸ್ ಗಳು ಸಂಚಾರ ಮಾಡುತ್ತಿರಲಿಲ್ಲ. ಜೊತೆಗೆ ವನ್ಯಜೀವಿಗಳ ಕಾಟವೂ ಇರುತ್ತಿತ್ತು. ಇದನ್ನು ಅರಿತ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಹಾಗೂ ವೀಡಿಯೋ ಮೂಲಕ ಒತ್ತಾಯಿಸಿದ್ದರು.
ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ರವರು ಇಲಾಖೆಗೆ ಸೇರಿದ ಸಫಾರಿ ಜೀಪ್ನಲ್ಲಿ ಪ್ರತಿನಿತ್ಯ ಶಾಲೆಗೆ ತೆರಳುವ ವಿದ್ಯಾರ್ಥಿಗಳನ್ನು ಸಮಯಕ್ಕೆ ಸರಿಯಾಗಿ ಕರೆದುಕೊಂಡು ಮತ್ತೇ ವಾಪಸ್ಸ್ ಕರೆ ತರುವ ಹೊಣೆಯನ್ನು ಹೊತ್ತುಕೊಂಡಿದ್ದು, ಮಂಗಳವಾರದಿಂದ ಈ ವ್ಯವಸ್ಥೆ ಜಾರಿ ಮಾಡಿದ್ದಾರೆ
ಅರಣ್ಯ ಇಲಾಖೆಯ ಜೀಪ್ಗೆ ವಿದ್ಯಾರ್ಥಿಗಳು ಹೂವಿಟ್ಟು, ಪೂಜೆ ಸಲ್ಲಿಸಿದ ಬಳಿಕ ಸಂಚಾರಕ್ಕೆ ಚಾಲನೆ ನೀಡಲಾಯಿತು.
