ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
15-12-2025
ಅಜಾತ ಶತ್ರು ಶಾಮನೂರು ಶಿವಶಂಕರಪ್ಪ ವಿಧಿವಶ.
ಕಟ್ಟುನಿಟ್ಟಿನ ಶಿಸ್ತುಬದ್ಧ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಈ ಹೆಸರು ಕೇಳಿದಾಕ್ಷಣ ಜನರು ಮತ್ತು ವಿರೋಧಿ ಬಣವು ಭಯಕ್ಕಿಂತ ಮಿಗಿಲಾಗಿ ಭಕ್ತಿತುಂಬಿದ ಮನದಿಂದ ಆರಾಧಿಸುತ್ತಿದ್ದರು.
ಅವರ ಮಾತು ನಡೆ ನುಡಿಗಳಲ್ಲಿ ಸಾಮ್ಯತೆ ಇರುತ್ತಿತ್ತು. ಕಾಯಕ ಅಂತ ಬಂದಾಗ ನಮ್ಮವರು ತಮ್ಮವರು ಭೇದಭಾವ ಹಮ್ಮು ಎಲ್ಲವನ್ನು ಬಿಟ್ಟು ಸರಿಸಮಾನರಾಗಿ ನೋಡುತ್ತಿದ್ದರು.
ಧೀಮಂತ ವ್ಯಕ್ತಿತ್ವದ ಸರಳ ಸಜ್ಕನ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ನಿಧನ ತುಂಬಲಾರದ ನಷ್ಟ.
ದಾವಣಗೆರೆ ಊರಿನ ಹೆಸರನ್ನ ಕರ್ನಾಟಕ ಮಾತ್ರವಲ್ಲ ದೇಶವ್ಯಾಪಿ ವ್ಯಾಪಿಸಿದ್ದು ಶಾಮನೂರು. ರಾಜಕಾರಣಲ್ಲಿ ಆರು ಬಾರಿ ಶಾಸಕರಾಗಿ ,ಒಂದು ಬಾರಿ ಸಂಸದರಾಗಿ ಮತ್ತು ಸಚಿವರಾಗಿ ಜನಪರ ಸೇವೆಗಳನ್ನ ಮಾಡಿದ್ದರು.
ರಾಜಕೀಯ ರಂಗದಲ್ಲಿ ವಿರೋಧ, ವಿರೋಧಿಗಳು ಸರ್ವೆಸಾಮಾನ್ಯ ಆದರೆ ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ವಿರೋಧಿಗಳು ಸಹ ಅವರ ವ್ಯಕ್ತಿತ್ವಕ್ಕೆಮಾರುಹೋಗಿದ್ದರು ಬಹುಶ ಅಂತ ರಾಜಕಾರಣಿ ಮತ್ತೊಬ್ಬರಿಲ್ಲ ಎಂಬುದುದೇ ವಿಶೇಷ.
ಕಷ್ಟ ,ನೆರವಿನ ವಿಷಯ ಬಂದಾಗ ಶಾಮನೂರು ಶಿವಶಂಕರಪ್ಪ ಅವರ ಕಣ್ಣೆದುರು ಕಾಣುತ್ತಿದ್ದದ್ದು ಕೇವಲ ಮಾನವೀಯತೆಯಾಗಿತ್ತು.
ಕೋವಿಡ್ ಸಂಕಷ್ಟದ ಸಮಯದಲ್ಲಿ ಬಡವರ ಪಾಲಿಗೆ ಸಾಕ್ಷಾತ್ ನಾರಾಯಣರಂತರಾಗಿದ್ದರು. ದಾವಣಗೆರೆಯಲ್ಲಿ ಕೋವಿಡ್ ಲಸಿಕೆಯ ಕೊರತೆ ಎದುರಾದಾಗ ಶಾಮನೂರು ಶಿವಶಂಕರಪ್ಪ ಎದೆಗುಂದದೆ ಕೋಟ್ಯಂತರ ಹಣ ಪಾವತಿಸಿ ಬಡವರಿಗೆ ಕೋವಿಡ್ ಲಸಿಕೆ ಹಾಕಿಸಿ ಅಂದು ಬಡವರ ಪಾಲಿನ ಭಗವಂತರಾದರು.
ದಾವಣಗೆರೆ ಎಂಬ ಒಂದು ಊರಿನಲ್ಲಿ ಬೃಹತ್ ಉದ್ಯೋಗ ಸೃಷ್ಠಿಸಿದ ಕೀರ್ತಿ ಶಾಮನೂರು ಅವರದು. ಕೈಗಾರಿಕೆ, ಬ್ಯಾಂಕ್ ಶಿಕ್ಷಣ ಸಂಸ್ಥೆಗಳನ್ನು ಸ್ಫಾಪಿಸಿ ಸಾವಿರಾರು ಜನರಿಗೆ ಉದ್ಯೋಗದಾತರಾದರು.
ರಾಜಕಾರಣೀ ಮತ್ತು ಕೈಗಾರಿಕೋದ್ಮಮಿಗಳು ಆಗಿದ್ದ ಶಾಮನೂರು ಶಿವಶಂಕರಪ್ಪ ಅವರ ಸಮಾಜ ಸೇವೆಗಳನ್ನ ಗುರುತಿಸಿ ರಾಜ್ಯ ಮತ್ತು ರಾಷ್ಟ್ರೀಯಮಟ್ಟದ ಪ್ರಶಸ್ತಿಗಳು ಲಭಿಸಿವೆ.
ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮುತ್ಸದ್ಧಿ ಶಾಮನೂರು ಶಿವಶಂಕರಪ್ಪ ಅಗಲಿದ್ದಾರೆ.
ಅವರ ಮಾರ್ಗದರ್ಶನ ಅವಿರತ ಸೇವೆ ಅವರು ತೋರಿಸಿದ ಸನ್ಮಾರ್ಗದಲ್ಲಿ ನಾವು ನಡೆದುಕೊಳ್ಳಬೇಕಿದೆ.
ಅಗಲಿದ ನಾಯಕನಿಗೆ ವಿವ ನ್ಯೂಸ್ ನುಡಿನಮದ ಮೂಲಕ ಅಶ್ರುತ್ರಪಣ ಅರ್ಪಿಸುತ್ತಿದೆ.
