ವರದಿಗಾರರು :
ಕೊಟ್ರಪ್ಪ ಹೆಚ್ ಹೊರದಿ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
11-12-2025
51 ಲಕ್ಷ ಮೌಲ್ಯದ ಚಿನ್ನಾಭರಣ ಕಳವು... ಪೊಲೀಸರ ಬಲೆಗೆ ಬಿದ್ದ ಬ್ಯಾಂಡ್ ಬಜಾ ಗ್ಯಾಂಗ್
ದಾವಣಗೆರೆಯಲ್ಲಿ 51.49 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆಯ ಕೆಟಿಜೆ ನಗರಪೊಲೀಸರು ಮಧ್ಯಪ್ರದೇಶದ ಕುಖ್ಯಾತ ಬ್ಯಾಂಡ್ ಬಜಾ ಗ್ಯಾಂಗ್ ನ ಸದಸ್ಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆಯ ಹೊರ ವಲಯದ ರೆಸಾರ್ಟ್‌ನಲ್ಲಿ ನ.14 ರಂದು ನಡೆದಿದ್ದ ವಿವಾಹ ಮಹೋತ್ಸವದ ಆರತಕ್ಷತೆ ಸಂದರ್ಭದಲ್ಲಿ ಬ್ಯಾಂಡ್ ಬಜಾ ಗ್ಯಾಂಗ್‌ನ ಕರಣ್ ವರ್ಮಾ ಸಿಸೋಡಿಯಾ, ವಿನಿತ್ ಸಿಸೋಡಿಯಾ ಎಂಬ ಕುಖ್ಯಾತ ದರೋಡೆಕೋರರು ಕದ್ದದ್ದಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ತಪ್ಪಿಸಿಕೊಂಡಿರುವ ಕರಣ್, ವಿನಿತ್ ಸಿಸೋಡಿಯಾ ಪತ್ತೆ ಕಾರ್ಯ ಮುಂದುವರಿದಿದೆ.
ಮಧ್ಯಪ್ರದೇಶದ ರಾಜಗಡ್ ಜಿಲ್ಲೆಯ ಪಚೋರಿಯಲ್ಲಿ ದಾವಣಗೆರೆಯ ಪೊಲೀಸರು ೧೪ ದಿನಗಳ ಕಾಲ ಮಾರು ವೇಷದಲ್ಲಿದ್ದುಕೊಂಡು ಗುಲ್‌ಖೇಡಾದಲ್ಲಿದ್ದ ಕಳ್ಳರ ವಿಳಾಸ, ಮನೆ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕಳ್ಳರನ್ನ ಹಿಡಿಯುವ ಸಂದರ್ಭದಲ್ಲಿ ಇಬ್ಬರು ತಪ್ಪಿಸಿಕೊಂಡು ಹೋಗಿದ್ದರೂ 51.49 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಅಂತಾರಾಜ್ಯ ಕುಖ್ಯಾತ ಕಳ್ಳರು ಕದ್ದಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಹಾಗೂ ಮಧ್ಯಪ್ರದೇಶ ಪೊಲೀಸ್ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.
