ವರದಿಗಾರರು :
ಸಿಂಚನ ||
ಸ್ಥಳ :
ಉಡುಪಿ
ವರದಿ ದಿನಾಂಕ :
12-12-2025
ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ
ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ
ವಿಜ್ಞಾನ ತಂತ್ರಜ್ಞಾನಗಳ ವಿಷಯದಲ್ಲಿ ಭಾರತೀಯ ಪ್ರತಿಭಾ ಕೌಶಲ್ಯ ಸಾಗರದಾಚೆಗೂ ಸದ್ದು ಮಾಡುತ್ತಿದೆ. ಅದರಲ್ಲೂ ಸ್ಪೇಸ್ ಎಕ್ಸ ಮತ್ತು ಟಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಭಾರತೀಯ ಯುವ ಪ್ರತಿಭೆಗಳನ್ನು ಕಂಡು ಫಿಧಾ ಆಗ್ಬಿಟ್ಟಿದ್ದಾರೆ
ಅಷ್ಟೆ ಆಗಿದ್ರೆ ಪರವಾಗಿರಲಿಲ್ಲ. ರೀ.... ಅಮೆರಿಕಾದಲ್ಲಿ ಕಷ್ಟಕರ ಕೆಲಸ ಮಾಡೋಕೆ ಪ್ರತಿಭೆಗಳ ಕೊರತೆ ಇದೆ ಅಂತಾ ಬೇರೇ ಅಂದ್ಬಿಟ್ರು.!!!! ಎಲಾ ಇವನ..ಮಸ್ಕ್ ಅಷ್ಟೆ ಅಲ್ಲ ರೀ..ಭಾರತೀಯ ಪ್ರತಿಭೆಗಳನ್ನ ಹುಡುಕೋದೆ ಅವರ ಕೆಲ್ಸ ಅಂತ ಬೇರೆ ಹೇಳವ್ನೆ..!!!
ಅಮೆರಿಕಾದಲ್ಲಿ ಭಾರತೀಯ ಪ್ರತಿಭಾಶಾಲಿಗಳಿಗೆ ವಿಪುಲ ಉದ್ಯೋಗವಕಾಶ . ಭಾರತದ ಪ್ರತಿಭೆಗಳಿಂದ ಅಮೆರಿಕಾಗೆ ಪ್ರಯೋಜನ ಇದೆ ಅಂತೆ
ಎಂತ ಗುಡ್ ನ್ಯೂಸ್ ಅಲ್ವೆ ?? ಅಲ್ಲಿಗ್ ಹೋಗಿ ಕೆಲ್ಸ ಮಾಡಿ ದುಡ್ ಮಾಡಿ ಧೀಡೀರ್ ಶ್ರೀಮಂತಾಗ್ಬಿಡಬಹುದು ಅಲ್ವೆ??
ಆದ್ರೆ ನನ್ನ ಪ್ರಶ್ನೆ ಅದಲ್ಲ ಗುರುವೆ...ಅಲ್ಲಿಗ್ ಹೋಗಿ ಕೆಲ್ಸ ಮಾಡೋ ಬದ್ಲು ನಾವೇ ನಮ್ ದೇಶದಲ್ಲಿ ಅದೇ ಪ್ರತಿಭೆಯನ್ನ ಯಾಕೆ ಬಳಸಿಕೊಳ್ತಿಲ್ಲ?? ಚೆನ್ನಾಗ್ ಹೇಳ್ದೆ ಬಿಡು.. ಅಂತೀರಾ. ಇಲ್ಲಿರೋ ಜಾಣ್ಮರಿ ಅಮೆರಿಕಾ ಅಯ್ಯೊ ದೊಡ್ಡಣ್ಣನ ದೇಶಕ್ಕೆ ಹೋಗಿಬಿಟ್ಟು ಅವರ ಶ್ರೀಮಂತ ಮಾಡೊದಾದ್ರೆ ನಮ್ ದೇಶವನ್ನೆ ಶ್ರೀಮಂತ ಮಾಡೋಣ. ಏನಂತಿ...!!!!
ನಮ್ ಮನೆ ಮುದ್ದು ಕರಡಿ ಅಂತ ನಾವೆಲ್ರೂ ಕರೀತಿದ್ದ ನನ್ ತಮ್ಮ ಇಂದು ಅಮೆರಿಕದಲ್ಲಿ ಕೆಲ್ಸ ಮಾಡೋವಷ್ಟು ಬುಧ್ಧಿವಂತ ಆದ ಅನ್ನೊ ಖುಷಿಗಿಂತ ಈ ಮುದ್ದು ಕರಡಿ ಇಲ್ಲೇ ಏನಾದ್ರು ಮಾಡಿ ಬೆಳಿ ಅಂತಾ ಯಾಕೆ ಯೋಚಿಸೋದಿಲ್ಲ..ಅಯ್ಯೋ ಶುವ್ನೆ ಹೌದಲ್ವೇ?? ಅಷ್ಟಕ್ಕೂ ಅಮೆರಿಕದಲ್ಲಿ ಇರೊದಾದ್ರು ಏನು.??..ಅದು ಭಾರತದಲ್ಲಿ ಯಾಕಿಲ್ಲ...ನನಗಂತೂ ಗೊತ್ತಿಲ್ಲ ರೀ.. ನಿಮಗೆ ಗೊತ್ತಿದ್ರೆ ತಿಳಿಸ್ತಿರಾ?? .
