ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
15-12-2025
ನಮ್ಮ ದೇಶದಲ್ಲಿ ಸಮಾನತೆ ಜೀವನ ನಡೆಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅತ್ಯಂತ ಶ್ರೇಷ್ಠ ವಾದ ಸಂವಿಧಾನ ವನ್ನು ಕೊ�
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಮಶೀರನಗರದ ಬುದ್ಧ ಭೂಮಿಯಲ್ಲಿ ಇಂದು ನಡೆದ ವಿಶ್ವಜ್ಞಾನಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಪೂಜ್ಯ ಭಂತೇಜಿರವ ದಿವ್ಯ ಸಾನಿಧ್ಯದಲ್ಲಿ ನೆರವೇರಿಸಲಾಯಿತು
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೇಂಪೂ ಮಾತನಾಡಿ ನಮ್ಮ ದೇಶದಲ್ಲಿ ಸಮಾನತೆ ಜೀವನ ನಡೆಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮಗೆಲ್ಲಜಗತ್ತಿನಲ್ಲೆ ಅತ್ಯಂತ ಶ್ರೇಷ್ಠ ವಾದ ಸಂವಿಧಾನ ವನ್ನು ಕೊಟ್ಟು ಹೋಗಿದಾರೆ ಅದರ ಮಾರ್ಗದರ್ಶನದಲ್ಲಿ ನಾವು ನಡೆಯುವುದು ನಮ್ಮ ಮುಖ್ಯವಾದ ಕರ್ತವ್ಯವಾಗಿದಲ್ಲದೆ ಸಂವಿಧಾನದ ರಕ್ಷಣೆ ಮಾಡುವುದು ಅತ್ಯಂತ ಪ್ರಮುಖ ಕರ್ತ್ಯವಾಗಿದರ ಎಂದು ತಿಳಿಸುವ ಮೂಲಕ ನಮ್ಮ ಸಂವಿಧಾನದ ಶ್ರೇಷ್ಠತೆ ಹಾಗೂ ಅವಶ್ಯಕತೆ ಬಗ್ಗೆ ತಿಳಿಸುವ ಬಗ್ಗೆ ಪ್ರಯತ್ನ ಮಾಡಿದರು
ಬೀದರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ರಾದ ಡಾ!! ಶೈಲೇಂದ್ರ ಬೆಲ್ದಾಳೆ ,ಗ್ಯಾರೆಂಟಿ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಅಮೃತ ರಾವ್ ಚಿಮ್ಮಕೋಡೆ, ಈ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಉದ್ಘಾಟನಾ ಸಮಿತಿಯ ಅಧ್ಯಕ್ಷರಾದ ಪ್ರಲ್ಹಾದ ಕಟ್ಟಿಮನಿ, ಉಪಾಧ್ಯಕ್ಷರು ಬಸವರಾಜ ಸಾಗರ, ರಾಜಕುಮಾರ ಜ್ಯೋತಿ, ಮಲ್ಲಿಕಾರ್ಜುನ ಬೌಗಿ, ವಿಜಯಕುಮಾರ ಶಿಂಧೆ, ಬಸವರಾಜ ಕಟ್ಟಿಮನಿ, ಭಾರತ ಕಟ್ಟಿಮನಿ, ಗೌತಮ ಸಾಗರ, ಮನೋಜ ಜ್ಯೋತಿ, ರಮೇಶ ಮಂದಕನಳ್ಳಿ, ಗೋವಿಂದ ಪೂಜಾರಿ, ಸಂದೀಪ ಕಾಟೆ, ಲಾಲಪ್ಪಾ ನಿಡಗುಂಚಿ, ನಾಗೇಶ ಗೌತಮ ಪ್ರಸಾದ, ರಜನಿಕಾಂತ ಆಣದೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
