ವರದಿಗಾರರು :
ಕಿಶೋರ್ ಎ ಸಿ ||
ಸ್ಥಳ :
KR PETE
ವರದಿ ದಿನಾಂಕ :
09-12-2025
ಕೆ.ಆರ.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿ
ಕೆ.ಆರ.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕತ್ತರಘಟ್ಟ ಗ್ರಾಮದ ಸತೀಶ್ ರವರ ಮಗ ಕಿರಣ್ ಅವರೇ ಚಿರತೆ ದಾಳಿಗೆ ಒಳಗಾಗಿ ಗಾಯಗೊಂಡಿರುವ ರೈತ.
ಸೋಮವಾರ ರಾತ್ರಿ ಸುಮಾರು 9ಗಂಟೆಯ ಸಮಯದಲ್ಲಿ ಜಮೀನು ಕಡೆ ಹೋಗಿದ್ದು ವಾಪಸ್ ಗ್ರಾಮಕ್ಕೆ ಬರುವಾಗ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿಯು ಕಿರಣ್ ಅವರ ಮೇಲೆ ದಾಳಿ ಮಾಡಿದಾಗ ಹೆದರದೇ ಚಿರತೆಯೊಂದಿಗೆ ಹೋರಾಡಿ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ.
ಇದೇ ರೀತಿ ಹಲವು ರೈತರ ಮೇಲೆ ದಾಳಿಗೆ ವಿಫಲ ಯತ್ನ ನಡೆಸಿದ್ದ ಚಿರತೆಯು ಕೊನೆಗೂ ರೈತ ಕಿರಣ್ ಮೇಲೆ ಮಾರಣಾಂತಿಕ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಡಿಸಿದೆ.
ರೈತರ ಸಾಕುಪ್ರಾಣಿಗಳಾದ ಕುರಿ ಮೇಕೆ, ಹಸು ಎಮ್ಮೆಗಳನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಹೊತ್ತೊಯ್ದು ತಿಂದು ಹಾಕುತ್ತಿರುವ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯು ವಿಫಲವಾಗಿದೆ ಎಂದು ಕತ್ತರಘಟ್ಡ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈಗ ರೈತನ ಮೇಲೆ ಚಿರತೆ ದಾಳಿ ಮಾಡಿದ್ದು, ಗಾಯಗೊಂಡ ರೈತ ಕಿರಣ್ ಅವರಿಗೆ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಿರತೆ ದಾಳಿಯ ಮಾಡಿ ರೈತ ಗಾಯಗೊಂಡಿರುವ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ರೈತನನ್ನು ಬೇಟಿ ಮಾಡಿ ಇಲಾಖೆಯ ವತಿಯಿಂದ ಸಿಗುವ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ವಿಫಲವಾಗಿದೆ. ಹಾಗಾಗಿ ತಾಲ್ಲೂಕು ಆಡಳಿತವು ರೈತನ ನೆರವಿಗೆಸಹಕರಿಸಬೇಕೆಂದು ಕಾಡು ಪ್ರಾಣಿಗಳಿಂದ ಪ್ರಾಣಾಪಾಯದಿಂದ ಪಾರಾಗುವ ಚಿಕಿತ್ಸೆ ಕೊಡಿಸುವ ಮೂಲಕ ರೈತನ ನೆರವಿಗೆ ತಾಲೂಕು ಆಡಳಿತ ಸಹಕರಿಸಬೇಕೆಂದು ಕತ್ತರಘಟ್ಟ ಗ್ರಾಮಸ್ಥರು ಅಗ್ರಹಿಸಿದ್ದಾರೆ
