ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
11-12-2025
ವಿಶ್ವದಲ್ಲೇ ಮಹತ್ತರ ಹೆಚ್ಚೆ ಇಟ್ಟ ಆಸೀಸ್. ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ
ಸಮಾಜಿಕ ಜಾಲತಾಣ ಮಿತಿ ಮೀರಿ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಮಕ್ಕಳ ಮೇಲೂ ಇದರ ಗಾಢ ಪರಿಣಾಮ ಬೀರಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗಿದೆ.
ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜಾಮಾಜಿಕ ಜಾಲತಾಣಗಳ ಖಾತೆಗೆ ಕಡಿವಾಣ ಹಾಕಿ ಆಸ್ಟ್ರೇಲಿಯ ಸರ್ಕಾರ ಬುಧವಾರ ಕಟ್ಡುನಿಟ್ಟಿನ ಕಾನೂನು ಜಾರಿಗೆ ತಂದಿದೆ. ಇದು ವಿಶ್ವದಲ್ಲೇ ಮಕ್ಕಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ಕಾನೂನು ಜಾರಿಯಾದ ಮೊದಲ ದೇಶವಾಗಿ ಹೊರಹೊಮ್ಮಿದೆ.
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಮೇಲೆ ಉಂಟಾಗಬಹುದಾದ ಅನಾಹುತವನ್ನ ಮನಗಂಡು ಅಭಿಯಾನ ಆರಂಭವಾಗಿತ್ತು. ಅದು ಕ್ರಮೇಣ ದೇಶವ್ಯಾಪಿ ಹರಡಿತ್ತು ಇಂದು ಅದರ ಕುರಿತು ಕಾನೂನು ಜಾರಿಯಾಗಿದೆ.
ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳೇನು?
ಚಿಕ್ಕ ಮಕ್ಕಳಲ್ಲಿ ಜಾಲತಾಣಗಳ ಪ್ರಯೋಜನಕ್ಕಿಂತ ಅನಾಹುತಗಳೇ ಹೆಚ್ಚಾಗಿವೆ. ಒಂದು ಕಡೆ ಜಾಲತಾಣಗಳಿಂದ ಬರುವ ವಿಷಯಗಳು ಮತ್ತು ದೃಶ್ಯಗಳು ಮಕ್ಕಳನ್ನು ನಿರಂತರವಾಗಿ ಮೊಬೈಲ್ ವೀಕ್ಷಿಸುವಂತೆ ಮಾಡುತ್ತಿವೆ
ಇದು ಮಕ್ಕಳಲ್ಲಿ ಕಣ್ಣಿನ ಸಮಸ್ಯೆ, ಮಾನಸಿಕ ಕ್ಷೋಭೆ ಹಾಗೂ ದೈಹಿಕ ಬಲಹೀನತೆಗೆ ಕಾರಣವಾಗುತ್ತಿವೆ. ಅವಿರತವಾಗಿ ಹೆಚ್ಚು ಬಳಕೆಯಲ್ಲಿರುವ ಜಾಲತಾಣಗಳಾದ ಫೇಸ್ಬುಕ್ ಇನ್ಸ್ಟಾಗ್ರಾಮ್, ಥ್ರಡ್ಸ್ ಟ್ವಚ್ಚಗಳಂತ ಸಾಮಾಜಿಕ ಜಾಲತಾಣಗಳನ್ನು ಚಿಕ್ಕ ವಯಸ್ಸಿನ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ.
