ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
09-12-2025
ಬೆಳಗಾವಿ ಸುವರ್ಣಸೌಧದಲ್ಲಿ ರಚನಾತ್ಮಕ ಚರ್ಚೆ
ಬೆಳಗಾವಿ ಚಳಿಗಾಲದ ಅಧಿವೇಶನ ಈ ಬಾರಿ ಸರ್ಕಾರ ಮೈಚಳಿ ಬಿಟ್ಟು ಉತ್ತರ ಕರ್ನಾಟಕ ಸರ್ವತೋಮುಖ ಅಭಿವೃದ್ಧಿಯ ಕುರಿತು ಚರ್ಚಿಸಲು ಮೊದಲ ದಿನದಿಂದಲೇ ಚರ್ಚೆಯ ಚಟುವಟಿಕೆಯಲ್ಲಿ ಪ್ರಗತಿ ಕಂಡಿದೆ.
ಇಂದಿನಿಂದ ಸತತ ಐದಾರು ಗಂಟೆಗಳ ಕಾಲ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಪರಿಹಾರ ಹಾಗೂ ಜನರ ನಿರೀಕ್ಷೆಗಳಿಗೆ ಸರ್ಕಾರ ಸ್ಪಂದಿಸಿ ಅದಕ್ಕೆ ಪೂರಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಕರೂಪ ಹಣೆದಿದೆ.
ಕೇವಲ ಹತ್ತು ದಿನಗಳ ಕಾಲ ಮಾತ್ರ ನಡೆಯಲಿರುವ ಈ ಅಧಿವೇಶನದ ಸಮಯ ವ್ಯರ್ಥ ಮಾಡದೇ ದಿನದ ಪ್ರತಿ ಗಂಟೆಯೂ ಚರ್ಚೆಗೆ ಮೀಸಲಿಡಲು ನಿರ್ಧರಿಸಲಾಗಿದೆ.
ಈ ಬಾರಿ ಅಧಿವೇಶನದಲ್ಲಿ ಕಲಾಪ ನಡೆಸಲು ಸಲಹಾ ಸಮಿತಿ ಸಭೆಯೂ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ ನಡೆಸಲು ಮುಂದಾಗಿದೆ. .ಇದರ ಜೊತೆಗೆ ಸಮಗ್ರ ಕರ್ನಾಟಕ ಕೇಂದ್ರಿತ ವಿಷಯಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ರಚನಾತ್ಮಕ ಚರ್ಚೆಗಳಲ್ಲಿ ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ಹಿರಿಯ ಸದಸ್ಯರಿಗೆ ವಿಷಯ ಪ್ರಸ್ತಾಪಿಸಲು ಅನುವು ಮಾಡಿಕೊಡಲಾಗುವುದು. ಒಬ್ಬರು ಪ್ರಸ್ತಾಪಿಸಿದ ವಿಚಾರ ಮತ್ತೊಬ್ಬರು ಅದೇ ವಿಚಾರ ಪ್ರಸ್ತಾಪಿಸದಂತೆ ಎಚ್ಚರಿಕೆ ವಹಿಸಿ , ಹೊಸ ಪ್ರಮುಖ ವಿಪಯ ಪ್ರಸ್ತಾಪಿಸಿದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳು ಸಾಧ್ಯ ಆಗ ಮಾತ್ರ ಅದು ರಚನಾತ್ಮಕ ಚರ್ಚೆಯಾಗಿ ರೂಪಗೊಳ್ಳುತ್ತದೆ ಎಂದು ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಹೇಳಿದರು.
