ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
15-12-2025
ಅನಿಸಿಕೆ
ಮನರಂಜನೆಗೆ ಯಾಕೆ ಸಿಕ್ತಿಲ್ಲ ಮನ್ನಣೆ...?
ಇಂದು ಮನರಂಜನೆ ಅನ್ನೋದು ಕೇವಲ ವಸ್ತುವಾಗಿ ,ಜಾಹೀರಾತಿನಂತೆ ಕಡೆಗಣಿಸುವಷ್ಟು ಬೇಡವಾಗಿ ಹೋಗಿದೆ.
ಅದೊಂದು ಕಾಲವಿತ್ತು. ಮನರಂಜನೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕಾಲ. ಆಗ ಮನರಂಜನೆಯ ಕಾರ್ಯಕ್ರಮಗಳನ್ನು ಮನಸೋ ಇಚ್ಛೆ ನೋಡಿ ಆನಂದಿಸುತ್ತಿದ್ದೇವು. ಮತ್ತೆ ಮತ್ತೆ ನೋಡಬೇಕಿಸುತ್ತಿತ್ತು.
ಆದರೆ ಇಂದು ಯಾಕೆ ಈ ಮನರಂಜನೆ ಮತ್ತು ಮನರಂಜನೆಯ ಕಾರ್ಯಕ್ರಮಗಳು ಸೊರಗತೊಡಗಿವೆ. ಅಸಲಿಗೆ ಇಂದಿನ ತಲೆಮಾರು ಹಿಂದಿನ ತಲೆಮಾರು ಅನ್ನೋದಕ್ಕಿಂತ ಹೆಚ್ಚಾಗಿ ವೇದಿಕೆಯ ಕೆಳಗೆ ಕುಳಿತು ಆಸ್ವಾದಿಸಬೇಕಿದ್ದ ಪ್ರೇಕ್ಷಕನೇ ಇಂದು ಮನರಂಜನೆಯ ವೇದಿಕೆಯಲ್ಲಿ ರಂಜಿಸುವಂತವನಾಗಿದ್ದಾನೆ.
ಕುತೂಹಲ ಮತ್ತು ಪೂರೈಕೆಗಳು ಅದರ ಬೇಡಿಕೆಗಳಿಗಿಂತ ಹಚ್ಚು ಹೆಚ್ಚಾಗಿ ಶ್ರಮವಿಲ್ಲದೇ ದೊರೆತಾಗ ಅದರ ಕುರಿತು ಆಸಕ್ತಿ ಕಡಿಮೆಯಾಗುತ್ತಾ ಬರುತ್ತದೆ.
ಅಂಗೈಯಲ್ಲಿ ತಂತ್ರಜ್ಞಾನ ಮತ್ತು ಅದನ್ನು ಪ್ರಚುರಪಡಿಸುವ ಕಲೆ ಎಲ್ಲರಿಗೂ ಕರಗತವಾಗಿವೆ. ನೋಡುವವರಿಗಿಂತ ಮಾಡಿ ತೋರುವವರೇ ಅಧಿಕವಾಗಿದ್ದಾರೆ. ಮನರಂಜನೆಯ ಕಥಾ ವಸ್ತು ತರ್ಕ ಕುತರ್ಕಗಳಿಂದ ಮಿಳಿತವಾಗಿವೆ. ಒಂದು ವೇದಿಕೆಯಲ್ಲಿ ನೋಡುಗರ ಸಂಖ್ಯೆ ಕ್ಷೀಣಿಸುತ್ತಿದೆ. ಕಾರಣ ಬಂದಿರುವ ನೋಡುಗರ ಪ್ರತಿಯೋರ್ವರಲ್ಲಿಯೂ ಒಂದೊಂದು ವೇದಿಕೆ ಸೃಷ್ಠಿಯಾಗುತ್ತಿವೆ.
ಸಿನೆಮಾ ಧಾರವಾಹಿ ರಂಗಭೂಮಿ. ಎಲ್ಲ ಪ್ಲಾಟ್ಪಾರ್ಮುಗಳು ಖಾಲಿ ಖಾಲಿ . ಸಾಮಾಜಿಕ ಜಾಲತಾಣ ಎಲ್ಲವನ್ನ ನುಂಗಿಬಿಟ್ಟಿವೆ. ಇದು ಕೇವಲ ಮನರಂಜನೆ ಕ್ಷೇತ್ರಕ್ಕೆ ಮಾತ್ರವಲ್ಲ ಶಿಕ್ಷಣ, ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿವೆ. ಮೊಬೈಲ್ ಒಂದು ಕ್ಷಣ ಕಾಣದಿದ್ದರೆ ಎದೆ ಝಲ್ ಎನ್ನುವಂತೆ ಮಾಡಿದೆ.
ಕುತೂಹಲವಿಲ್ಲದ ಮನಸ್ಸು, ಸದಾ ಒತ್ತಡದ ಜಂಜಾಟ. ಯಾಂತ್ರೀಕೃತ ಕೆಲಸ ಬೇಕೆಂದಾಗ ಸಿಗುವ ಸೌಲಭ್ಯಗಳು. ಇದರಿಂದ ಮನುಷ್ಯನ ನಾಳಿನ ಬದುಕು ಹೇಗರಲಿದೆ ಎಂದು ಊಹಿಸಲೂ ಅಸಾಧ್ಯ..
ಮನುಷ್ಯ ಮನುಷ್ಯನ ನಡುವೆ ಸಂಬಂಧ ಸೇತು ಶಕ್ತಿಹೀನವಾಗಿದೆ. ಕುಟುಂಬಗಳಲ್ಲಿರುವ ಸದಸ್ಯರುಗಳನ್ನ ಮೊಬೈಲ್ ದೂರಮಾಡುತ್ತಿದೆ.
ಇದೇ ರೀತಿ ಮುಂದುವರೆಯುತ್ತಿದ್ದರೆ ಪಶುಗಳಿಗೂ ಮಾನವರಿಗೂ ಯಾವ ಭೇಧವೂ ಇರಲಾರದೆಂದೆನಿಸುತ್ತಿದೆ .
ನಾಳಿನ ಭವಿಷ್ಯ ??
ನಾಳಿನ ಬಗ್ಗೆ ಯಾರಿಗ್ ಗೊತ್ ಗುರು.. ಇದು ಎಲ್ಲರಲ್ಲೂ ಕೇಳಿ ಬರುವ ಸಾಮಾನ್ಯ ಡೈಲಾಗ್..
ಮತ್ತೆ ಅಣಿಯಾದ್ರು ಮೊಬೈಲ್ ಎಂಬ ಭೂಗತ ಲೋಕಕ್ಕೆ......!!!!!!
