ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
10-12-2025
ಭಾರತದಿಂದ ರಪ್ತಾಗುವ ಅಕ್ಕಿಯ ಮೇಲೆ ಅಮೆರಿಕದ ಪ್ರತಿಸುಂಕದ ಛಾಯೆ!!!
ಅಮೆರಿಕಾಗೆ ಅಕ್ಕಿ ರಪ್ತು ಮಾಡುವ ದೇಶಗಳಲ್ಲಿ ಭಾರತವು ಎರಡನೇಯ ಸ್ಥಾನದಲ್ಲಿದೆ..ಅಂದಾಜು ಶೇಖಡ 26% ಅಕ್ಕಿ ಭಾರತದಿಂದ ಅಮೆರಿಕ ದೇಶದಕ್ಕೆ ರಪ್ತು ಮಾಡಲಾಗುತ್ತಿದೆ.
ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ರಪ್ತಾಗುವ ಅಕ್ಕಿಯ ಮೇಲೆ ಮತ್ತೆ 25% ಪ್ರತಿಸುಂಕ ವಿಧಿಸುವ ಸೂಚನೆ ನೀಡಿದ್ದಾರೆ. ಇಂದು ನಡೆಯಲಿರುವ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಮಾತುಕತೆಯ ಮುನ್ನವೇ ಟ್ರಂಪ್ ಹೇಳಿಕೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಕೃಷಿ ವಲಯದ ಪದಾಧಿಕಾರಿಗಳೊಂದಿಗೆ ವಿಷೇಶ ಸಭೆ ನಡೆಸಲಾಗಿತ್ತು . ಇದೇ ಸಂದರ್ಭದಲ್ಲಿ ಲೂಸಿಯಾನ ಮೂಲದ ಮೆರಿಲ್ ಕೆನಡಿ ಎಂಬ ಗಿರಣಿ ಮಾಲಿಕ ಅಮೆರಿಕ ದೇಶದ ಅಕ್ಕಿ ಉತ್ಪಾದಕರ ಸಮಸ್ಯೆಯ ಕುರಿತು ಗಮನಸೆಳೆದಿದ್ದ. ಇದರಿಂದ ಟ್ರಂಪ್ ಭಾರತದಿಂದ ರಪ್ತಾಗುವ ಅಕ್ಕಿಯ ಮೇಲೆ ಪ್ರತಿಸುಂಕ ಹೇರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಭಾರತದಲ್ಲಿ ವಾರ್ಷಿಕ 150 ದಶಲಕ್ಷ ಟನ್ ಅಕ್ಕಿಯನ್ನ ಬೆಳಯಲಾಗುತ್ತಿದೆ. ಇದರಿಂದ ಅಮೆರಿಕ ವಿಧಿಸಲಿರುವ ಪ್ರತಿಸುಂಕದ ಪರಿಣಾಮ ಅಕ್ಕಿ ಬೆಳೆಗಾರರ ಮೇಲೆ ಬೀರಲಿದೆ.
