ವರದಿಗಾರರು :
ತೌಕೀರ್ ಖತೀಬ್ ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
15-12-2025
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನದಾಫ್-ಪಿಂಜಾರಾ ಸಮಾಜದಿಂದ ಪ್ರತಿಭಟನೆ
ನದಾಫ್ ಪಿಂಜಾರಾ ಸಮಾಜಕ್ಕೆ ಸ್ಥಾಪಿಸಿದ ಪ್ರತ್ಯೇಕ ನಿಗಮಕ್ಕೆ ಅನುದಾನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧದ ಎದುರು ಪ್ರತಿಭಟನೆಯನ್ನು ನಡೆಸಲಾಯಿತು. ಈ ವೇಳೆ ಮನವಿಯನ್ನು ಸ್ವೀಕರಿಸಿದ ಶಾಸಕ ಲಕ್ಷ್ಮಣ ಸವದಿ ಅವರು ಸೋಮವಾರ ಸದನದ ಗಮನಕ್ಕೆ ತರುವ ಭರವಸೆಯನ್ನು ನೀಡಿದರು.
ಇನ್ನು ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನದಾಫ್ ಪಿಂಜಾರಾ ಅಭಿವೃದ್ಧಿಗೊಂಡಿಲ್ಲ. ನಿಗಮ ಸ್ಥಾಪನೆಯಾದರೂ ಅದರ ಮೂಲಕ ಅನುದಾನವನ್ನು ನೀಡುತ್ತಿಲ್ಲ. ಇಲ್ಲವೇ ಅಲ್ಪಸಂಖ್ಯಾತರ ನಿಗಮದಿಂದ ಪ್ರತ್ಯೇಕ ಅನುದಾನವನ್ನು ನೀಡಬೇಕು. ಇದು ಸರ್ಕಾರದ ಮೇಲಿನ ಹೊರೆಯನ್ನು ತಪ್ಪಿಸಲಿದೆ. ಶೈಕ್ಷಣಿಕ ಸವಲತ್ತು ನೀಡಬೇಕು. ಪ್ರತ್ಯೇಕ ಅಧ್ಯಯನ ಪೀಠ ನಿರ್ಮಿಸಬೇಕು. ಅಲ್ಪಸಂಖ್ಯಾತರ ಶಾಲಾ ಕಾಲೇಜಿನ ವಸತಿಗೃಹಗಳಲ್ಲಿ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಸಮಾಜದ ಪ್ರಮುಖರಾದ ಜಲೀಲ್’ಸಾಬ್ ಅವರು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಮಾಜಿ ಡಿಸಿಎಂ ಮತ್ತು ಅಥಣಿ ಹಾಲಿ ಶಾಸಕರಾದ ಲಕ್ಷ್ಮಣ ಸವದಿ ಅವರು, ಮುಸ್ಲಿಂನಲ್ಲಿರುವ ಒಳಪಂಗಡವಾಗಿರುವ ನದಾಫ್ ಪಿಂಜಾರ್’ಗೆ ಪ್ರತ್ಯೇಕ ನಿಗಮಕ್ಕಾಗಿ ಆಗ್ರಹಿಸುತ್ತಿದ್ದಾರೆ. ಅಭಿವೃದ್ಧಿ ನಿಗಮದ ಮೂಲಕ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ವಿಶೇಷವಾಗಿ ಒತ್ತು ನೀಡಬೇಕು. ಒಳಪಂಗಡ ಮೀಸಲು ಪ್ರತ್ಯೇಕವಾಗಿ ನೀಡಬೇಕು. ನದಾಫ್ ಪಿಂಜಾರಾ ಸಮುದಾಯ ಉತ್ತರ ಕರ್ನಾಟಕದಲ್ಲಿಯೇ ಹೆಚ್ಚಾಗಿದ್ದಾರೆ. ಇದನ್ನ ಸೋಮವಾರ ಸರ್ಕಾರ ಗಮನಕ್ಕೆ ತರಲಾಗುವುದು ಎಂದು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನದಾಫ್ ಪಿಂಜಾರಾ ಸಮಾಜ ಬಾಂಧವರು ಭಾಗಿಯಾಗಿದ್ಧರು.
