ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
13-12-2025
180ನೇ ಅನುಭವ ಮಂಟಪ ತಿಂಗಳ ಕಾರ್ಯಕ್ರಮ”
ನಗರದ ಡಾ. ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ 180ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ದಲ್ಲಿ .ಭಾಲ್ಕಿಯ ಹೀರೆಮಠ ಸಂಸ್ಥಾನದ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಆಶೀರ್ವಚನ ನೀಡುತ್ತಾ, ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದೇವರು ಮಕ್ಕಳ, ಮಹಿಳೆಯರಿಗಾಗಿ ಶಿಕ್ಷಣ ಮತ್ತು ಬಡ, ದೀನ ದಲಿತರ ಕಲ್ಯಾಣಗೋಸ್ಕರ ಸೇವೆ ಮಾಡಿದ್ದಾರೆ.
ಅವರು ಪ್ರಕೃತಿಯ ಮೇಲೆ ಅಪಾರ ಪ್ರೀತಿ ಉಳ್ಳವರಾಗಿದ್ದರು. ಅವರ ವಾಕ್‌ಸುದ್ದಿಯಿಂದ ನುಡಿದಿದ್ದು ಮಂತ್ರಗಳಾಗಿದ್ದು, ಅವರೊಬ್ಬರು ಪ್ರವಾಡ ಪುರಷರು, ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿ ಜಿಲ್ಲೆಯಲ್ಲಿ ಮಹಿಳಾ ಶಾಲಾ-ಕಾಲೇಜು, ಪ್ರಸಾದ ನಿಲಯ ಪ್ರಾರಂಭಿಸಿ ಅಕ್ಷರ, ಅನ್ನ, ಆಶ್ರಯ ದಾಸೋಹ ಮಾಡುತ್ತಿದ್ದರು
ಬಸವ ತತ್ವದ ಜೊತೆಗೆ ಅವರು ಕನ್ನಡ ಸೇವೆ ಮಾಡುವುದೆ ಅವರ ಉಸಿರಾಗಿತ್ತು. ಮುಂದೆ ನಾಡೋಜ ಡಾ. ಬಸವಲಿಂಗ ಪಟ್ಟದೇವರು 1992 ರಲ್ಲಿ ಹೀರೆಮಠ ಸಂಸ್ಥಾನ ವಿದ್ಯಾಪೀಠ ಪ್ರಾರಂಭಿಸಿದ್ದಾರೆ. ಪ್ರಸ್ತುತ ಅವರ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 20,000 ಸಾವಿರ ವಿದ್ಯಾರ್ಥಿಗಳು ಪ್ರಾಥಮಿಕದಿಂದ ಕಾಲೇಜು ಮಟ್ಟದವರೆಗೆ ಪಠ್ಯಕ್ರಮದ ಜೊತೆಗೆ ಶರಣ ಸಂಸ್ಕೃತಿ, ಸಂಸ್ಕಾರ ಮತ್ತು ಮೌಲ್ಯಯುವ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ನುಡಿದರು.
ದಾಸೋಹಿಗಳಾದ ಪ್ರೊ. ಮಂಗಲಾ, ಪ್ರೊ. ಸೋಮನಾಥ ಪಾಟೀಲ್ ರವರು ಬಸವಗುರು ಪೂಜೆ ನೇರವೆರಿಸಿದರು.ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ಖುಷಿ ಸಂಜೀವಕುಮಾರ ವಚನ ಚಿಂತನೆ ನಡೆಸಿಕೊಟ್ಟರು. ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದವರಿಂದ ಗುರುಬಸವ ಪ್ರಾರ್ಥನೆ ನೇರವೆರಿತು. ಚನ್ನಬಸವ ನೌಬಾದೆ, ಶ್ರೀನಿವಾಸ ಪಾಪಡೆ ವಚನ ಗಾಯನ ನಡೆಸಿಕೊಟ್ಟರು.
46ನೇ ಶರಣ ಕಮ್ಮಟ ಉತ್ಸವದಲ್ಲಿ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳಾದ ಅರ್ಪಿತಾ, ಮಾಣಿಕೇಶ್ವರಿ, ದೀಪಿಕಾ, ರಾಜಾಬಾಯಿ, ಶೃತಿ, ರಿತೀಕಾ, ನೇಹಾ ರವರು ಬಸವಣ್ಣನವರ ಸುಮಾರು 400 ವಚನಗಳನ್ನು ವಚನಗಳನ್ನು ಹೇಳಿದ್ದಕ್ಕೆ, ಸಾಹಿತಿಗಳಾದ ರಾಜಕುಮಾರ ಜುಬುರೆ ರವರು ಅವರ ಚಿಕ್ಕಪ್ಪನವರಾದ ಪೂಜ್ಯ ಶ್ರೀ ಶೇಷರಾವ ಮಹಾರಾಜರ ಸ್ಮರಣೋತ್ಸವ ನಿಮಿತ್ಯ ಮಕ್ಕಳಿಗೆ ಪ್ರತಿಯೊಬ್ಬರಿಗೆ ರೂ. 1000.00 ಬಹುಮಾನ ನೀಡಿದ್ದಾರೆ.ಇದೇ ಸಂದರ್ಭದಲ್ಲಿ ಇಂಗಳೇಶ್ವರ ವೀರಕ್ತಮಠದ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳು ಲಿಂಗೈಕ್ಯರಾಗಿದ್ದರ ನಿಮಿತ್ಯ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಲಾಯಿತು. ಪ್ರೊ. ಮಂಗಲಾ ಪಾಟೀಲ ಸ್ವಾಗತ ಕೋರಿದರೆ, ಶೃತಿ ಸಂತೋಷ ನಿರೂಪಿಸಿದರು.
ಶೃದ್ಧಾ ಪ್ರಕಾಶ ವಂದಿಸಿದರು. ಪ್ರೊ. ಉಮಾಕಾಂತ ಮೀಸೆ ಕಾರ್ಯಕ್ರಮ ಸಂಘಟಿಸಿದರು. ಪ್ರಮುಖರಾದ ಡಾ. ವೈಜಿನಾಥ ಬಿರಾದಾರ, ಗುರುನಾಥ ಬಿರಾದಾರ, ನಾಗಶೆಟ್ಟಿ ಜ್ಯೋತೆಪ್ಪನೋರ್, ಮೀನಾಕ್ಷಿ ಪಾಟೀಲ್, ಲಕ್ಷ್ಮಿಬಾಯಿ ಮಾಳಗೆ, ತೀರ್ಥಮ್ಮ ರೆಡ್ಡಿ, ಭಾಗೀರತಿ ಕೊಂಡಾ, ಶಕುಂತಲಾ ಮಲ್ಕಾಪೂರ, ಕಸ್ತೂರಿ ಬಿರಾದಾರ, ಪ್ರೇಮಾ ಮುಚಳಂಬೆ, ಸವಿತಾ ಗಂಧಿಗುಡಿ, ಶರಣಪ್ಪಾ ಖೇಡ್ ಮತ್ತು ಪ್ರಸಾದ ನಿಲಯದ ವಿದ್ಯಾರ್ಥಿಗಳು ಮತ್ತು ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ಹಾಗೂ ಶರಣು-ಶರಣಿಯರು ಭಾಗವಹಿಸಿದ್ದರು.
