ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
10-12-2025
ಡಿಸೆಂಬರ್ 10 ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನ
ಮಾನವನ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸಲು ಡಿಸೆಂಬರ್ 10 ರಂದು ಮಾನವ ಹಕ್ಕುಗಳ ದಿನವನ್ನಾಗಿ ಆಚರಣೆಗೆ ತರಲಾಯಿತು.
ಏನಿದು ಮಾನವ ಹಕ್ಕುಗಳು?
ಮಾನವರ ನಡುವೆ ಭೇದಭಾವ ಕಾಣದೇ ಸಮಾನತೆಯಿಂದಿರುವುದು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಸ್ಪದ ನೀಡುವುದು. ಶೋಷಣೆಯ ವಿರುಧ್ದ ಹೋರಾಡುವ ಹಕ್ಕನ್ನು ಪಡೆಯುವುದು ಧಾರ್ಮಿಕ ಸ್ವಾತಂತ್ರ್ಯ .
ಅಂತರಾಷ್ಟ್ರೀಯಮಟ್ಟದಲ್ಲಿ ಮಾನವ ಹಕ್ಕನ್ನು 1950 ರಿಂದ ಅಧಿಕೃತವಾಗಿ ಆಚರಿಸಲಾಯಿತು. ಸಾಮಾನ್ಯ ಸಭೆಯ ನಿಯಮ 423(v) ಅನ್ವಯ ಇದನ್ಮು ಘೋಷಿಸಲಾಯಿತು...
ಭಾರತದಲ್ಲಿ ಮಾನವ ಹಕ್ಕು ಮತ್ತು ಸಂವಿಧಾನ.
ಭಾರತದಲ್ಲಿ ಮಾನವ ಹಕ್ಕುಗಳನ್ನು ಸಂವಿಧಾನಾತ್ಮಕವಾಗಿ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಮೂಲಭೂತ ಹಕ್ಕುಗಳ ಖಾತರಿ ಇದರ ಮುಖೇನ ಭಾರತದ ಸಂವಿಧಾನವು ನಾಗರಿಕ ಮೂಲಭೂತ ಹಕ್ಕುಗಳನ್ನು ಪ್ತತಿಪಾದಿಸುತ್ತದೆ.
ಕಾನೂನು ರಕ್ಷಣೆಯ ವಿಷಯದಲ್ಲಿ ಸಾಂವಿಧಾನಾತ್ಮಕ ಪರಿಹಾರಗಳ ಹಕ್ಕನ್ನು ನೀಡುವುದರ ಮೂಲಕ ನ್ಯಾಯಾಲಯದಲ್ಲಿ ಈ ಹಕ್ಕುಗಳನ್ನು ಜಾರಿಗೊಳಿಸಲಾಗುತ್ತದೆ.
ಸಂವಿಧಾನವು ಅಂತರಾಷ್ಟ್ರೀಯಮಟ್ಟದಲ್ಲಿ ದೇಶದ ಕಾನೂನು ವ್ಯವಸ್ಥೆಯ ಭಾಗವಾಗಿ ಮಾನವ ಹಕ್ಕುಗಳ ಅಂತರಾಷ್ಟ್ರೀಯ ಒಪ್ಪಂದಗಳನ್ನು ಅಳವಡಿಸಿಕೊಳ್ಳಲು ಮಾರ್ಗಸೂಚಿ ನೀಡುತ್ತದೆ.
