ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
12-12-2025
ಕಸದಿಂದ ರಸ ತಗೆಯುವ ಕಲೆಗೆ ಸಾಕ್ಷಿಯಾದ ಆಂಧ್ರಪ್ರದೇಶ
ಒಂದು ಮಾತಿದೆ ಕಸದಿಂದ ರಸ ತಗೆಯಬೇಕು. ಇದರರ್ಥ ಯಾವ ಕೆಲಸದಲ್ಲೂ ಮೇಲು ಕೀಳೆಂಬುವುದಿಲ್ಲ. ಅದಕ್ಜೆ ಈಗ ಜ್ವಲಂತ ಸಾಕ್ಷಿಯಾಗಿ ನಿಂತಿದೆ ಆಂಧ್ರಪ್ರದೇಶ.
ಬೆಂಗಳೂರಿನಲ್ಲಿ ಬೆಳಿಗಾಯಿತೆಂದರೆ ಕಸದ ಗಾಡಿಗೆ ಎದುರು ನೋಡುವ ಪರಿಪಾಠ. ಮಕ್ಕಳಿಗೆ ಸ್ಕೂಲಿಗೆ ಬಿಡಬೇಕು, ಆಫೀಸಿಗೆ ಟೈಮ್ ಆಯ್ತು ಎಂಬಿತ್ಯಾದಿ ಟೆನ್ಷನ್ ..ಕಸದ ಗಾಡಿ ಬಂದು ಹೋದ್ರೆ ಮನೆಯಲ್ಲಿದ್ದ ಕಸದ ಬುಟ್ಟಿಗೆ ಮುಕ್ತಿ.
ಆದರೆ ನಾವು ಯಾವುದು ಕಸ ಅಂತ ಕರೆಯುವ ತ್ಯಾಜ್ಯಗಳಿಗೆ ಈಗ ಆಂಧ್ರಪ್ರದೇಶದಲ್ಲಿ ಅದು ಬಹುಬೇಡಿಕೆಯ ವಸ್ತುವಾಗಿದೆ. ಪ್ರತಿದಿನ ಸಂಗ್ರಹಿಸುವ ಕಸದಿಂದ ಪ್ಲಾಸ್ಟಿಕ್ ಲಭ್ಯತೆಯ ಅಂಶ ಅಡಗಿದೆ. ಆಂಧ್ರಪ್ರದೇಶದ ಕಡಪಾದಲ್ಲಿ ದಾಲ್ಮಿಯ ಸಿಮೆಂಟ್ ಕಂಪನಿ ಕಸದಲ್ಲಿ ಲಭ್ಯವಾಗುವ ಪ್ಲಾಸ್ಟಿಕ್ ಖರೀದಿಗೆ ಮುಂದಾಗಿದೆ. ಅದಕ್ಕೆ ಬೆಂಗಳೂರು ಘನತ್ಯಾಜ್ಯ ವಿಲೇವಾರಿ ಸಂಸ್ಥೆ ಆಂಧ್ರಪ್ರದೇಶಕ್ಕೆ ಕಸ ರಪ್ತು ಮಾಡುವುದಕ್ಕೆ ತಯಾರಿ ನಡೆಸಿದೆ.
ಪ್ರತಿದಿನ ಸುಮಾರು 350 ಮೆಟ್ರಿಕ್ ಟನ್ ಕಸ ಪೂರೈಕೆಯಾಗಲಿದ್ದು, ದಾಲ್ಮಿಯ ಸಿಮೆಂಟ್ ಕಂಪನಿ ಇ.ಪಿಆರ್ ಕ್ರಡಿಟ್ ಪಾಂಯಿಂಟ್ಸ ನೀಡಲಿದೆ. ಇದರಿಂದ ಇಪಿಆರ್ ಪಾಯಿಂಟ್ಸಗಳಿಂದ ಖಾಸಗಿ ಸಂಸ್ಥೆಗಳಿಗೆ ಮಾರಟ ಮಾಡಿ ಲಾಭಗಳಿಕೆಯ ಯೋಜನೆಯನ್ನು ಬೆಂಗಳೂರು ತ್ಯಾಜ್ಯ ವಿಲೇವಾರಿ ಸಂಸ್ಥೆ ಹೊಂದಿದೆ.
ಬೆಂಗಳೂರಿನ ಜನತೆ ಹಸಿ ಮತ್ತು ಒಣ ಕಸಗಳನ್ನು ವಿಂಗಡನೆ ಮಾಡಿಕೊಟ್ಟರೆ ಪ್ರತಿದಿನ ಅಂದಾಜು ಒಂದು ಸಾವಿರ ಮೆಟ್ರಿಕ್ ಟನ್ನಷ್ಟು ಪ್ಲಾಸ್ಟಿಕ್ ಲಭ್ಯವಾಗಲಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಸಿ.ಇ.ಓ ಕರೀಗೌಡ ಮಾಧ್ಯಮಕ್ಕೆ ಮಾಹಿತಿ ನೀಡಿದರು.
