ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
15-12-2025
ಭಾರತ ಅಮೆರಿಕ ವ್ಯಾಪರ ಒಪ್ಪಂದ ಮತ್ತು ಪ್ರತಿಸುಂಕ
ಭಾರತದ ಆಮದು ಸರಕಿನ ರಪ್ತಿನ ಮೇಲೆ ಅಮೆರಿಕ ವಿಧಿಸಿರುವ ಶೇ.50 ಪ್ರತಿಸುಂಕದ ಕರಿನೆರಳು ಸ್ವತಃ ಅಮೆರಿಕಾದ ಮೇಲೇಯೇ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ
ಈ ಕುರಿತು ಅಮೆರಿಕ ಸಂಸತ್ತಿನಲ್ಲಿ ಭಾರತದಿಂದ ಆಮದಾಗುವ ಸರಕುಗಳ ಮೇಲಿನ ಪ್ರತಿಸುಂಕ ತೆರವಿಗೆ ನಿಲುವಳಿ ಮಂಡಿಸಲಾಗಿದೆ
ಭಾರತದ ಮೇಲೆ ವಿಧಿಸಿರುವ ಪ್ರತಿಸುಂಕ ಕ್ರಮ ಕಾನೂನು ಬಾಹಿರ. ಉಭಯ ದೇಶಗಳ ವ್ಯಾಪಾರ ವ್ಯವಹಾಗಳ ಮೇಲೆ ನೇರ ಪರಿಣಾಮ ಬೀರುತ್ತದಲ್ಲದೇ, ಅಮೆರಿಕದ ಕಾರ್ಮಿಕರು ಮತ್ತು ಗ್ರಾಹಕರಿಗೆ ಇದು ಆಶಾದಾಯಕವಲ್ಲ ಎಂದು ಡೆಮಕ್ರಾಟಿಕ್ ಪಕ್ಷ ಆಪಾಧಿಸಿದೆ. ಭಾರತ ಅಮೆರಿಕ ದ್ವಿಪಕ್ಷೀಯ ಸಂಬಂಧ ಮರುಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದೆ.
ಕಳೆದ ಅಗಷ್ಟ್ ಆರರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ರಪ್ತು ಸರಕಿನ ಮೇಲೇ ಶೇ 25 ಹೆಚ್ವುವರಿ ಪ್ರತಿಸುಂಕ ವಿಧಿಸಿದ್ದರು.
