ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
13-12-2025
ಚಳಿಗಾಲದ ಅಧಿವೇಶನ ಮತ್ತು ಖುರ್ಚಿ ಬಿಸಿ
ಚಳಿಗಾಲದ ಅಧಿವೇಶನ ಔಪಚಾರಿಕವಾಗಿ ಮಾತ್ರ ನಡೆಯುತ್ತಿದೆಯಾ? ಅಥವ ಖುರ್ಚಿ ಕದನಕ್ಕೆ ಅಣಿಯಾಗ್ತಿದೆಯಾ? ಬಲ್ಲವರು ಯಾರು....?
ಅಲ್ಪಾವಧಿಯ ಅಧಿವೇಶನ ಮತ್ತೆ ಖುರ್ಚಿ ಕದನದೊಂದಿಗೆ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ.
ಅಲ್ಪಾವಧಿಯ ಅಧಿವೇಶನ ಮತ್ತೆ ಖುರ್ಚಿ ಕದನದೊಂದಿಗೆ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಸಿಎಮ್, ಡಿಸಿಎಮ್ ನಾಯಕದ್ವಯರು ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿ ನಾಯಕತ್ವ ವಿಚಾರದ ಕುರಿತು ಸಧ್ಯಕ್ಕೆ ತೆರೆ ಎಳೆಯುವ ತೀರ್ಮಾನಕ್ಕೆ ಬಂದಿದ್ದರು. ಈ ತೀರ್ಮಾನದಿಂದ ಕಡೇ ಪಕ್ಷ ಬೆಳಗಾವಿ ಅಧಿವೇಶನ ನಿರಾಯಾಸವಾಗಿ ಸಾಗಲಿದೆ ಎಂದೇ ಭಾವಿಸಲಾಗಿತ್ತು.
ಆದರೆ ಆಗಿದ್ದೇ ಬೇರೆ. ಅಧಿವೇಶನವೇನೋ ನಡೆಯುತ್ತಲೇ ಇದೆ. ಜೊತೆಗೆ ನಾಯಕತ್ವದ ಬದಲಾವಣೆಯ ಕೂಗಿಗೆ ಮತ್ತೆ ಜೀವ ಬಂದಂತಾಗಿದೆ. ಎರಡು ಬಣಗಳ ನಾಯಕರ ಕಡೆಯವರ ಹೇಳಿಕೆ ಪ್ರತಿಹೇಳಿಕೆಗಳು ಮತ್ತೆ ಖುರ್ಚಿ ಕದನದ ವೇದಿಕೆ ಸಿದ್ಧವಾದಂತಿದೆ.
ಒಟ್ಟಿನಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮುಗಿಸಿ ಬರುವಷ್ಡರಲ್ಲಿ ನಾಯಕತ್ವ ಬದಲಾವಣೆಯ ಬಿಸಿ ಏರುವುದು ಸಿದ್ಧವಾದಂತಿದೆ.
