ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
13-12-2025
ಚಳಿಗಾಲದ ಅಧಿವೇಶನದಲ್ಲಿ ಸಚಿವರುಗಳ ಸಾಮಾನ್ಯ ಜ್ಞಾನಭಂಡಾರ ಅನಾವರಣ
ಚಳಿಗಾಲದ ಅಧಿವೇಶನದಲ್ಲಿ ಸಚಿವರುಗಳ ಸಾಮಾನ್ಯ ಜ್ಞಾನಭಂಡಾರ ಅನಾವರಣ
ಬೆಳಗಾವಿಯ ಸುವರ್ಣಸೌಧದಲ್ಲಿ ಆಡಳಿತ ಪಕ್ಷದಿಂದಲೇ ಪಕ್ಷದ ಸಚಿವರುಗಳು ಹೊಂದಿರುವ ಸಾಮಾನ್ಯ ಜ್ಞಾನದ ಕರಿತು ಅಸಮಾಧಾನ ವ್ಯಕ್ತವಾಯಿತು.
ಸಚಿವರುಗಳಿಗೆ ಬೆಂಗಳೂರು ಮಾತ್ರ ಅವರಿಗೆ ತಿಳಿದಿದೆ ಹೊರತು ಒಂದು ಸಮಗ್ರ ಕರ್ನಾಟಕದ ಜಿಲ್ಲೆಗಳ ಮಾಹಿತಿಯೇ ಇಲ್ಲ ಎಂದು ಕಾಂಗ್ರೆಸ್ನ ಬಿರ್ ಆರ್ ಪಾಟೀಲ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಖಾನಾಪುರ, ನಿಪ್ಪಾಣಿ ಅಳಂದ ಗುರುಮಿತ್ ಹಾಗೂ ಇಂಡಿಯಂತ ಪ್ರದೇಶಗಳು ಯಾವ ಭಾಗದಲ್ಲಿವೆ. ಅದರ ಕುರಿತು ಸಚಿವರುಗಳಿಗೆ ಅರಿವಿದೆಯೇ? ಎಂದು ಪ್ರಶ್ನೆ ಮಾಡಿದರು.
ರಾಜಧಾನಿ ಬೆಂಗಳೂರು ಅಥವ ಅವರಿರುವ ಕ್ಷೇತ್ರ ಇವೆಷ್ಟೆ ಗೊತ್ತಿದ್ದರೆ ಹೇಗೆ. ಸಚಿವರಾದವರಿಗೂ ಸಮಗ್ರ ಕರ್ನಾಟಕದ ಬಗ್ಗೆ ಜ್ಞಾನ ಹಾಗೂ ಮಾಹಿತಿ ಇರಬೇಡವೆ? ಅದು ಇಲ್ಲದಿದ್ದರೆ ಸಮಗ್ರ ಕರ್ನಾಟಕದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ತಮ್ಮ ಪಕ್ಷದವರೇ ಆಗಿರುವ ಸಚಿವರುಗಳ ವಿರುದ್ಧ ಬಿ.ಅರ್ ಪಾಟೀಲ್ ಗುಡುಗಿದರು.
