ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
11-12-2025
ಋತುಚಕ್ರ ರಜೆಗೆ ಕಟ್ಟುನಿಟ್ಟಿನ ಕ್ರಮಕ್ಜೆ ರಾಜ್ಯ ಸರ್ಕಾರ ಅನುಮೋದನೆ ಸಾಧ್ಯತೆ
ರಾಜ್ಯ ಸರ್ಕಾರ ಹೊರಡಿಸಿದ್ದ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಒಂದು ದಿನ ವೇತನ ಸಹಿತ ರಜೆ ಕಡ್ಡಾಯಗೊಳಿಸಿ ಅನುಮೋದನೆ ನೀಡುವ ಸಾಧ್ಯತೆಗಳಿವೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕರ್ನಾಟಕ ಮಹಿಳಾ ಯೋಗಕ್ಷೇಮ ಕಾಯ್ದೆ- 2025 ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ.
ಈ ಕಾಯ್ದೆಯನ್ವು ಕರ್ನಾಟಕ ಯೋಗಕ್ಷೇಮ ಪ್ರಾಧಿಕಾರ ರಚಿಸಿ ಋತುಚಕ್ರದ ಸಮಯದಲ್ಲಿ ರಜೆ ನೀಡದಿರುವಿಕೆ, ಭೇದಭಾವ ಹಾಗೂ ಅಸ್ಪಶ್ಯರಂತೆ ಅವರನ್ನು ನಡೆಸಿಕೊಂಡರೆ ಐದು ಸಾವಿರ ರೂಪಾಯಿ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಋತುಚಕ್ರದ ಸಮಯದಲ್ಲಿ ರಜೆ ನೀಡುವ ಕುರಿತು ಪರ- ವಿರೋಧಗಳು ವ್ಯಕ್ತವಾಗಿದ್ದವು.ಈ ಕುರಿತು ಪ್ರಸಕ್ತ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪ್ರತ್ಯೇಕ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಕಾಯ್ದೆಯ ವಿರುದ್ಧ ಯಾರೂ ನ್ಯಾಯಾಲಯದ ಮೊರೆ ಹೋಗುವಂತಿಲ್ಲ ಎಂದು ಕಾಯ್ದೆಯಲ್ಲಿ ಸ್ಪಷ್ಟಪಡಿಸಿದೆ.
ಋತುಚಕ್ರದ ರಜೆಗೆ ನಿಯಮಗಳೇನು?
ಋತುಚಕ್ರದ ಸಮಯದಲ್ಲಿ ವೇತನ ಸಹಿತ ಒಂದು ದಿನದ ರಜೆಗೆ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಅನ್ವಯವಾಗಲಿದೆ. ಇದರಲ್ಲಿ ಪ್ರಮುಖವಾಗಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೂ ಅನ್ವಯಿಸಲಿದೆ.
ಐವತ್ತೆರಡು ವರ್ಷ ದಾಟಿದ ಮಹಿಳೆಯರಿಗೆ ಹಾಗೂ ಮುಟ್ಟು ಅವಧಿ ಮುಗಿದ ಮಹಿಳೆಯರಿಗೆ ಋತುಚಕ್ರದ ಒಂದು ದಿನದ ರಜೆ ಅನ್ವಯಿಸುವುದಿಲ್ಲ. ಮುಟ್ಟಿನ ದಿನ ಸರ್ಕಾರಿ ರಜೆ ಅಥವ ಭಾನುವಾರದ ದಿನ ಬಂದರೆ ಅದನ್ನು ವಾರದಲ್ಲಿ ಒಂದು ದಿನ ಪಡೆಯಲು ಅವಕಾಶವಿದ್ದು. ಒಂದು ತಿಂಗಳ ಮುಟ್ಟಿನ ರಜೆಯನ್ನು ಇನ್ನೊಂದು ತಿಂಗಳ ರಜೆಯೊಂದಿಗೆ ಸೇರಿಸಿ ಪಡೆಯಲು ಅವಕಾಶವಿಲ್ಲ.
