ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
10-12-2025
ನೊಬೆಲ್ ಪ್ರಶಸ್ತಿ ಪ್ರದಾನ ದಿನ
ಅಲ್ಪ್ರಡ್ ನೊಬೆಲ್ ಅವರ ಸ್ಮರಣಾರ್ತ ಇಂದು ಡಿಸೆಂಬರ್ 10 ರಂದು ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಅಲ್ಪ್ರೆಡ್ ನೊಬೆಲ್ ಒಬ್ಬರು ರಸಾಯನಶಾಸ್ತ್ರದ ಅಭಿಯಂತರರಾಗಿದ್ದರು, ಅವರು ಖ್ಯಾತ ಉದ್ಯಮಿಯಾಗಿಯೂ ಹೆಸರುವಾಸಿಯಾಗಿದ್ದರು. ಅದರಲ್ಲೂ ಡೈನಮೈಟನ್ನು ಅವಿಷ್ಕಾರಗೊಳಿಸಿದ ಕೀರ್ತಿ ನೊಬಲ್ ಅವರದ್ದು.
1895 ರಲ್ಲಿ ಅಲ್ಪ್ರಡ್ ನೊಬೆಲ್ ತಮ್ಮ ವಿಲ್ನಲ್ಲಿ ( ಉಯಿಲಿನಲ್ಲಿ) ನೊಬೆಲ್ ಪ್ರಶಸ್ತಿಯ ಕುರಿತು ನೋಂದಣಿ ಮಾಡಿಸಿದ್ದರು. 1901 ರಲ್ಲಿ ಪ್ರಪ್ರಥಮ ಬಾರಿಗೆ ನೊಬೆಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಅಲ್ಪ್ರೆಡ್ ನೊಬೆಲ್ ತಾವು ಸಂಪಾದಿಸಿದ ಜ್ಞಾನ ಮತ್ತು ಸಂಪತ್ತನ್ನು ವೈದ್ಯಕೀಯ, ವಿಜ್ಞಾನ, ಶಾಂತಿ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದವರನ್ನು ಗುರುತಿಸಲು ಮೀಸಲಿಟ್ಟರು.
1896 ಡಿಸೆಂಬರ್ 10 ರಂದು ಅಲ್ಪ್ರಡ್ ನೊಬಲ್ ನಿಧನರಾದರು. ಅಂದಿನಿಂದ ಅವರ ಸ್ಮರಣಾರ್ತ ಪ್ರತಿ ವರ್ಷ ಡಿಸೆಂಬರ್ 10 ರಂದು ನೊಬಲ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಭಾರತೀಯರಿಗೆ ಇದುವರೆಗೂ ವಿವಿಧ ಕ್ಷೇತ್ರಗಳಲ್ಲಿ ಒಟ್ಟು ಹತ್ತು ಸಾಧಕರಿಗೆ ಈ ಪ್ರಶಸ್ತಿ ಲಭಿಸಿವೆ.
