ವರದಿಗಾರರು :
ನಾ.ಅಶ್ವಥ್ ಕುಮಾರ್ ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
11-12-2025
ಬಂಡೀಪುರದಲ್ಲಿ ವ್ಯಾಘ್ರ ದಾಳಿ: ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿಗೆ ತೀವ್ರ ಗಾಯ
ಜಮೀನಿನಲ್ಲಿ ಗಾಯಗೊಳಿಸಿರುವ ಜಾನುವಾರುಗಳನ್ನ ಮೇಯಿಸಿ ವಾಪಾಸ್ಸಾಗುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ನಡೆಸಿದ ವ್ಯಾಘ್ರ ತೀವ್ರತರವಾಗಿ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆಯಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕುಂದಕೆರೆಯಲ್ಲಿ ಮಲಿಯಪ್ಪ (60) ಎಂಬವರ ಮೇಲೆ ದಾಳಿ ನಡೆಸಿದ ಹುಲಿ ಮುಖ ಹಾಗೂ ತಲೆ ಹಿಂಬಾಗಕ್ಕೆ ಗಾಯಗೊಳಿಸಿದೆ, ಹಸುಗಳ ಜೊತೆ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಅಲ್ಲಿಯೇ ಪೊದೆಯಲ್ಲಿ ಅಡಗಿದ್ದ ದಿಢೀರನೆ ಮಲಯಪ್ಪ ಅವರ ಮೇಲೆರಗಿದೆ .
ಈ ವೇಳೆ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸದಲ್ಲಿ ತೊಡಗಿದ್ದವರು ಜೋರಾಗಿ ಕೂಗಿಕೊಂಡಾಗ ಗಾಬರಿಗೊಂಡ ಹುಲಿ ಸ್ಥಳದಿಂದ ಕಾಲ್ಕಿತ್ತಿದೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ದಾಳಿಗೊಳಗಾದ ರೈತನನ್ನ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿ ಪಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಚಿಕಿತ್ಸಾ ವೆಚ್ಚವನ್ನ ಇಲಾಖೆಯಿಂದಲೇ ಭರಿಸುವುದಾಗಿ ತಿಳಿಸಿದ್ದಾರೆ.
