ವರದಿಗಾರರು :
ಮುತ್ತುರಾಜ್ ||
ಸ್ಥಳ :
ಕೊರಟಗೆರೆ
ವರದಿ ದಿನಾಂಕ :
15-12-2025
ಅಭಿವೃದ್ದಿ ಕೆಲಸಗಳೇ ಶಾಶ್ವತ ತುಮಕೂರಿಗೆ ೨೦೨೬ಕ್ಕೆ ಎತ್ತಿನಹೊಳೆ ನೀರು.. ಪುರಸಭೆ ಚುನಾವಣೆಗೆ ಸಜ್ಜಾಗಿ ಪರಂ ಕರ�
ನಾನು ಕೊರಟಗೆರೆ ಕ್ಷೇತ್ರದಲ್ಲಿ ಶಾಸಕನಾಗಿ ನೂರು ವರ್ಷ ಇರೋದಿಲ್ಲ. ಆದರೇ ನಾನು ಮಾಡಿದ ಅಭಿವೃದ್ದಿ ಕೆಲಸಗಳೇ ಶಾಶ್ವತವಾಗಿ ಉಳಿಯುತ್ತೇ. ೨೦೨೬ರ ಮಳೆಗಾಲಕ್ಕೆ ಎತ್ತಿನಹೊಳೆ ನೀರು ತುಮಕೂರಿಗೆ ಬರುತ್ತೇ. ಕೊರಟಗೆರೆ ಕ್ಷೇತ್ರದ ೭೦ಕೆರೆಗಳಿಗೆ ಹರಿಯುತ್ತೇ. ರೈತ ಸಮುದಾಯದ ಅಭಿವೃದ್ದಿಗೆ ನಾನು ಯಾವ ತ್ಯಾಗಕ್ಕೂ ಸಿದ್ದನಿದ್ದೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಭರವಸೆ ನೀಡಿದರು.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಎತ್ತಿನಹೊಳೆ ಯೋಜನೆಯಿಂದ ಭೂ ಸ್ವಾಧೀನವಾದ ಜಮೀನಿನ ರೈತರಿಗೆ ಪರಿಹಾರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೆಡಿಎಸ್ ಮತ್ತು ಬಿಜೆಪಿ ನಾಯಕರ ಹುನ್ನಾರದಿಂದ ಬೈರಗೊಂಡ್ಲು ಬಫರ್‌ಡ್ಯಾಂ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಆಯ್ತು. ರೈತರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸವನ್ನು ವಿರೋಧ ಪಕ್ಷದವ್ರು ಮಾಡಿದ್ರು. ರೈತರ ಜೊತೆ ಅಧಿಕಾರಿವರ್ಗ ಸಭೆ ನಡೆಸಿ ಮನವೋಲಿಸಲು ಪ್ರಯತ್ನಪಟ್ರು. ನಾನು ೩ಸಲ ರೈತ ಮುಖಂಡರ ಸಭೆ ನಡೆಸಿ ಮನವಿ ಮಾಡಿದ್ರು ಪ್ರಯೋಜನಾ ಆಗದೇ ಈಗ ನಮ್ಮ ರೈತರಿಗೆ ನಷ್ಟವಾಯ್ತು ಎಂದರು.
ಎತ್ತಿನಹೊಳೆ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ ೩೨೦೦ಎಕರೇ ಜಮೀನು ಭೂಸ್ವಾಧೀನ ಆಗಿದೆ. ರೈತರಿಗೆ ಸರಕಾರ ೧ಸಾವಿರ ಕೋಟಿ ಪರಿಹಾರ ನೀಡಬೇಕಿದೆ.
ಅದರಲ್ಲಿ ಈಗಾಗಲೇ ೮೪೦ಕೋಟಿ ರೈತರ ಖಾತೆಗಳಿಗೆ ಜಮಾ ಆಗಿದೆ. ಇನ್ನೂಳಿದ ಹಣ ೩೦ದಿನಗಳಲ್ಲಿ ಜಮಾ ಆಗಲಿದೆ. ಈಗ ಕೊರಟಗೆರೆ ಕ್ಷೇತ್ರದ ೫೮ಜನ ರೈತರಿಗೆ ೨೨ಜಮೀನಿಗೆ ೫ಕೋಟಿ ೫೫ಲಕ್ಷ ವಿತರಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು. ನಾನು ಶಿಕ್ಷಣ ಸಚಿವನಾಗಿದ್ದ ವೇಳೆ ತುಮಕೂರು ಜಿಲ್ಲೆಗೆ ವಿಶ್ವವಿದ್ಯಾಲಯ ತಂದಿದ್ದೇನೆ. ೨೦೦ಎಕರೇ ವಿಸ್ತೀರ್ಣದಲ್ಲಿ ಕ್ಯಾಂಪಸ್ ಉದ್ಘಾಟನೆ ಮಾಡಿದ್ದೇನೆ. ಕೊರಟಗೆರೆಯ ಇಬ್ಬರು ಐಎಎಸ್ ಅಧಿಕಾರಿಗಳು ದೇಶದ ವಿವಿದೆಡೆ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಏನೇ ಕೇಳಿದ್ರು ಅನುಧಾನ ತರುವ ಜವಾಬ್ದಾರಿ ನನ್ನದು. ಗ್ರಾಮೀಣ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದೆ ಎಂದು ವಿದ್ಯಾರ್ಥಿಗಳು ಕಿವಿಮಾತು ಹೇಳಿದರು.
