ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
11-12-2025
ಭಾರತದ ಸಿ.ಎ.ಗಳಿಗೆ ವಿದೇಶಗಳಲ್ಲಿದೆ ಭಾರಿ ಬೇಡಿಕೆ
ಸಾಪ್ಟ್ವೇರ್, ಹಾರ್ಡ್ವೇರ್ , ಬೈಯೋ ಟಕ್ನೋಲಜಿ ಕ್ಷೇತ್ರಗಳಲ್ಲಿ ಭಾರತದ ಪ್ರತಿಭಾವಂತರಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಸಂಗತಿ.
ಆದರೆ ಈಗ ಟ್ರೆಂಡ್ ಬದಲಾಗುತ್ತಿದೆ. ಟೆಕ್ಕಿಗಳು ಮಾತ್ರವಲ್ಲ ಇದೀಗ ಸಿ.ಎ. ಅಂದರೆ ಚಾರ್ಟಡ್ ಅಕೌಂಟಟ್ ಗಳಿಗೂ ವಿದೇಶಗಳಲ್ಲಿ ಬೇಡಿಕೆ ಹೆಚ್ಚಿವೆ.
ವಿದೇಶಗಳಲ್ಲಿ ಸಿ.ಎ.ಗಳಿಗೆ ಲಕ್ಷಾಂತರ ಸಂಬಳದ ಉದ್ಯೋಗ ಖಾತ್ರಿಯಾಗಿವೆ. ಕೇವಲ ಎರಡು ಮೂರು ವರ್ಷಗಳ ಅನುಭವವುಳ್ಳವರು ಈಗ ವಿದೇಶಗಳತ್ತ ಮುಖ ಮಾಡುವ ಕಾಲ ಸನ್ನಿಹಿತವಾಗಿದೆ. ಒಂದು ಮಾಹಿತಿಯ ಪ್ರಕಾರ ಅಮೆರಿಕದಲ್ಲಿ ಭಾರತದ ಸಿ.ಎ.ಗಳ ನೇಮಕಾತಿ ಹೆಚ್ವಿನ ಪ್ರಮಾಣದಲ್ಲಿ ನಡೆಯುತ್ತಿದೆ
ಅದಕ್ಕೆ ಕಾರಣ ವಿಶ್ವದ ದೊಡ್ಡಣನ ದೇಶದಲ್ಲಿ ಸಿ.ಪಿ.ಎ ಗಳು ಅಂದರೆ ಸರ್ಟಿಫೈಡ್ ಪಬ್ಲಿಕ್ ಅಕೌಂಟಟ್ ಇದ್ದಾರೆ. ಭಾರತದಲ್ಲಿ ಸಿ.ಎ. ಅಂದರೆ ಚಾರ್ಟಡ್ ಅಕೌಂಟಟ್ ಇದನ್ನ ಇನ್ಸ್ಟಿಟ್ಯೂಟ್ ಆಪ್ ಚಾರ್ಟೆಡ್ ಅಕೌಂಟ್ ಆಪ್ ಇಂಡಿಯ ( ಐ.ಸಿ.ಎ.ಐ) ಎಂಬ ಸಂಸ್ಥೆ ಈ ಸಿ.ಎ. ಪ್ರಮಾಣಪತ್ರ ನೀಡುತ್ತದೆ.
ಸದ್ಯ ಅಮೆರಿಕದಲ್ಲಿ ಆರು ಲಕ್ಷ ಸಿ.ಪಿ.ಎ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದರು. ಕಾರಣಾಂತರಗಳಿಂದ ಸಿಪಿಎ ಉದ್ಯೋಗಿಗಳ ಸಂಖ್ಯೆ ಪ್ರಸಕ್ತ ಸಾಲಿನಲ್ಲಿ ಮೂರು ಲಕ್ಷಕ್ಜೆ ಇಳಿದಿದೆ. ಇದರಿಂದ ಭಾರತದ ಸಿ.ಎಗಳಿಗೆ ಅಮೆರಿಕದಲ್ಲಿ ಬೇಡಿಕೆಯ ಪ್ರಮಾಣ ಹೆಚ್ಚಿದೆ.
ಅದರಲ್ಲೂ ಅಮೆರಿಕದಲ್ಲಿ ಮಧ್ಯಮ ಕೆಳಮಧ್ಯಮ ಸಿ.ಪಿಎ ಕಂಪನಿಗಳು ಶೇಖಡ 60% ರಷ್ಟು ಕೆಲಸಗಳನ್ನು ಭಾರತದ ಸಿ.ಎಗಳಿಂದಲೇ ಮಾಡಿಸಿಕೊಳ್ಳುತ್ತಿದೆ.
ಯಾವ ದೇಶಗಳಲ್ಲಿ ಸಿ.ಎ.ಗಳ ವಾರ್ಷಿಕ ಸಂಬಳ ಏಷ್ಟಿವೆ.
ಕೆನಡ 30 ಲಕ್ಷ, ಅಮೆರಿಕ 35 ಲಕ್ಷ, ಬ್ರಿಟನ್ 27 ಲಕ್ಷ ಸೌದಿಅರೆಬಿಯಾದಲ್ಲಿ 7 ಲಕ್ಷ ಗಳಷ್ಟು ಸಂಬಳವಿದೆ.
