ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
11-12-2025
ವಿಶ್ವ ಕನ್ನಡಿಗರ ಸಂಸ್ಥೆ ವತಿಯಿಂದ ಸಂಘರ್ಷ ಜೀವಿ ಉಮೇಶಕುಮಾರ ಸೋರಳ್ಳಿಕರಗೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶ
ವಿಶ್ವ ಕನ್ನಡಿಗರ ಸಂಸ್ಥೆ ವತಿಯಿಂದ ಸಂಘರ್ಷ ಜೀವಿ ಉಮೇಶಕುಮಾರ ಸೋರಳ್ಳಿಕರಗೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ.
ಬೀದರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ಗಡಿ ಕನ್ನಡಿಗರ ಉತ್ಸವ 70 ನೇ ಕರ್ನಾಟಕ ರಾಜ್ಯೋತ್ಸವ ಪದ್ಮಶ್ರೀ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ವೇದಿಕೆ ಮೂಲಕ ರಾಜ್ಯ ಮಟ್ಟದ ಗಡಿ ಕನ್ನಡಿಗರ ಉತ್ಸವ 70 ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ, ಸಾಹಿತ್ಯ ಸಾಂಸ್ಕೃತಿಕ ಕನ್ನಡ ಹಾಡುಗಳ ಪ್ರಸಾರ, ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶನ, ಡಾ. ಚನ್ನಬಸವ ಪಟ್ಟದೇವರ ಜೀವನ ಹೋರಾಟ, ಡಾ. ಜಯದೇವಿ ತಾಯಿ ಲಿಗಾಡೆ ಬದುಕು ಬರಹ ವಿಚಾರ ಸಂಕಿರಣ ಹಾಗೂ ಕರ್ನಾಟಕ ಕಾಯಕ ರತ್ನ ರಾಷ್ಟಿಯ ಸದ್ಬಾವನಾ ರಾಷ್ಟಿçÃಯ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ರತ್ನ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜರುಗಿತು.
ಕಳೆದ 25 ವರ್ಷಗಳಿಂದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾಗಿ, ವಿಭಾಗಿಯ ಸಂಚಾಲಕರಾಗಿ ಶೋಷಿತರ ನ್ಯಾಯದ ಧ್ವನಿಯಾಗಿ ಕೆಲಸ ಮಾಡುತ್ತಿರುವ ಸಂಘರ್ಷ ಜೀವಿ ಉಮೇಶಕುಮಾರ ಸೋರಳ್ಳಿಕರ್ ರವರಿಗೆ ಕರ್ನಾಟಕ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ವಿಶ್ವನಾಥ ಜಿ ಪಿ ರವರು ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ಉಪಾಧ್ಯಕ್ಷ ಪ್ರಕಾಶ ಪ್ರಧಾನ ಕಾರ್ಯದರ್ಶಿ ಪ್ರೀಯಾಂಕ ಖಜಾಂಚಿ ಶಾರದ ಹಿರಿಯ ಉಪಾಧ್ಯಕ್ಷರಾದ ತೇಜಮ್ಮಾ ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಅಮೃತ ಪಾಟೀಲ್ ಸಿರನೂರು ರಾಜ್ಯ ಸಂಘಟನ ಕಾರ್ಯದರ್ಶಿ ಚಂದ್ರಕಾAತ ದೇವಕೆ ಜಿಲ್ಲಾಧ್ಯಕ್ಷ ಮುಖೇಶ ಶಾಹಗಂಜ್ ಉಪಾಧ್ಯಕ್ಷ ಬಸವರಾಜ ಜಡಗೆ, ಪ್ರಧಾನ ಕಾರ್ಯದರ್ಶಿ ಅಂಬಾದಾಸ ಸೈನೆ ಸಂದೀಪ ಚಾಂಬೋಳ, ನಗರ ಅಧ್ಯಕ್ಷ ಭಗವಾನ ಯಾದವ ಉಪಸ್ಥಿತರಿದ್ದರು. ಬಾಬುರಾವ ಕೆ ಬಿಟ್ಟೆ ಕೈಲಾಸ ದೊಡ್ಡಮನಿ ಆಕಾಶ ಸಿಂಧೆ, ಮಹಾನರ ಪಾಲಿಕೆ ಸದಸ್ಯರಾದ ಶ್ರೀ ದಿಗಂಬರ ಮಡಿವಾಳ ರವರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
