ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
BIDAR
ವರದಿ ದಿನಾಂಕ :
09-12-2025
ಮನೆ ಮನೆಗೆ ಅಂಬೇಡ್ಕರ್ ಅಭಿಯಾನಕ್ಕೆ ಚಾಲನೆಶೈಕ್ಷಣಿಕ–ಸಾಮಾಜಿಕ ಜಾಗೃತಿ ಮೂಡಲಿ
ಬುಧ್ದ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಬೀದರ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ವೃತ್ತದಲ್ಲಿ “ಮನೆ ಮನೆಗೆ ಅಂಬೇಡ್ಕರ್ ಅಭಿಯಾನ”ಕ್ಕೆ ಭಂತೆ ವರಜ್ಯೋತಿ ರವರು ಚಾಲನೆ ನೀಡಿದರು.
ಬುದ್ಧ ಭಾರತ ಸಮೃದ್ಧ ಭಾರತ ಮನುವಾದಿಗಳ ಅಸಹಿಷ್ಣುತೆ, ಅಂಧಕಾರ, ಅವೈಜ್ಞಾನಿಕತೆಯಿಂದ ಸವಾಲಿನಲ್ಲಿದೆ. ಡಾ.ಅಂಬೇಡ್ಕರ್ 2500 ವರ್ಷದ ಬುಧ್ದ ತತ್ವದ ಗತವೈಭವವನ್ನು ಸಂವಿಧಾನದ ಮೂಲಕ ಪುನರುಜ್ಜೀವನಗೊಳಿಸಿದ್ದಾರೆ,” ಎಂದು ಹೇಳಿದರು.ಅವರು ಮುಂದುವರಿಸಿ,“ಸAವಿಧಾನದ ಕಾರಣದಿಂದ ಬಡವರು, ಹಿಂದೂಳಿದ ವರ್ಗಗಳು, ಅಲ್ಪಸಂಖ್ಯಾತರು, ಶೋಷಿತರು, ಮಹಿಳೆಯರು ಇಂದಿಗೆ ಶಿಕ್ಷಕಿ, ವೈದ್ಯೆ, ಇಂಜಿನಿಯರ್, ಶಾಸಕಿ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಾಗುವ ಮಟ್ಟಕ್ಕೆ ಬಂದಿದ್ದಾರೆ.
ಇದನ್ನೇ ಸಹಿಸಲಾಗದೆ ಕೆಲವರು ಸಂವಿಧಾನ ಹಾಗೂ ಅಂಬೇಡ್ಕರ್ ಕುರಿತು ಅವಹೇಳನಕಾರಿ ಮಾತು ಮಾತಾಡುತ್ತಿರುವೆ. ಜಾಗೃತಿ ಮೂಡಿಸಲು ಈ ಅಭಿಯಾನ ಪ್ರಮುಖ ಪಾತ್ರ ವಹಿಸಲಿದೆ,” ಎಂದು ಹೇಳಿದರು.ಅಭಿಯಾನ ಸಂಚಾಲಕ ಹಾಗೂ ಬುಧ್ದ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ್ ಗೋರನಾಳಕರ್ ಮಾತನಾಡಿ,“ಅಂಬೇಡ್ಕರ್ ಅಂದರೆ ಶಿಕ್ಷಣ, ಮಹಿಳಾ ಅಭಿವೃದ್ಧಿ, ಉದ್ಯೋಗ, ಮೀಸಲಾತಿ, ಸಮಾನತೆ, ಜಾತ್ಯತೀತತೆ, ಬಂಧುತ್ವ, ರಾಷ್ಟ್ರಪ್ರೇಮ ಹಾಗೂ ಸರ್ವಾಂಗೀಣ ಅಭಿವೃದ್ಧಿಯ ಸಂಕೇತ,” ಎಂದರು.
ಅಭಿಯಾನ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ.ಕಾಶಿನಾಥ ಚೆಲ್ವಾ ಮಾತನಾಡಿ, “ಯುವಕರು ದುಶ್ಚಟಗಳಲ್ಲಿ ಸಿಲುಕುತ್ತಿದ್ದಾರೆ, ಉದ್ಯೋಗದ ಸಂಕಷ್ಟ ಎದುರಿಸುತ್ತಿದ್ದಾರೆ; ಅವರಿಗೆ ಆರೋಗ್ಯ, ಶಿಕ್ಷಣ ಮತ್ತು ಸ್ವಯಂ ಉದ್ಯೋಗದ ಕುರಿತು ಜಾಗೃತಿ ಮೂಡಿಸುವುದು ಅತ್ಯವಶ್ಯ,” ಎಂದು ಹೇಳಿದರು. ಹಳ್ಳಿಗಳಲ್ಲಿರುವ ಅಂಬೇಡ್ಕರ್ ಭವನಗಳನ್ನು ಗ್ರಂಥಾಲಯಗಳಾಗಿ ಪರಿವರ್ತಿಸುವ ಜವಾಬ್ದಾರಿಗೂ ಅಭಿಯಾನ ಬದ್ಧವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೊಡೆ, ಹೋರಾಟಗಾರರು: ರಮೇಶ ಡಾಕುಳಗಿ, ಅನೀಲಕುಮಾರ ಬೆಲ್ದಾರ, ಬಾಬುರಾವ ಪಾಸ್ವಾನ, ದಶರಥ ಗುರು, ಶ್ರೀಪತರಾವ ದಿನೆ, ಶಿವಕುಮಾರ ನಿಲಿಕಟ್ಟಿ, ರಮೇಶ ಸಾಗರ, ಶರಣು ಫುಲೆ, ಪ್ರಕಾಶ ರಾವಣ, ಹರ್ಷಿತ ದಾಂಡೆಕರ್, ಅಂಬಾದಾಸ ಗಾಯಕವಾಡ, ಉಲಾಸಿನಿ ಮುದಾಳೆ, ಲುಂಬಿಣಿ ಪರಂಜಪೆ, ಸಂಗೀತಾ ಕಾಂಬಳೆ, ಪ್ರದೀಪ್ ನಾಟೆಕರ್, ಸಂದೀಪ್ ಕಾಂಟೆ, ಸುನೀಲ್ ಸಂಗಮ್, ರಮೇಶ್ ಪಾಸ್ವಾನ ಮತ್ತಿತರರು ಪ್ರಸಕ್ತಿದ್ದರು ಎಂದು ಸಂಚಾಲಕ ಮಹೇಶ್ ಗೋರನಾಳಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
