ವರದಿಗಾರರು :
ಪ್ರವೀಣ್ ಶೆಟ್ಟಿ ||
ಸ್ಥಳ :
KUNDAPUR
ವರದಿ ದಿನಾಂಕ :
09-12-2025
ಅನಿಸಿಕೆ
ಶಿಕ್ಷಣ ವಿದ್ಯಾರ್ಥಿ ಮತ್ತ ಸಮಾಜ ಶಿಕ್ಷಣ ಇದು ಕೇವಲ ಓದಿ ಒಳ್ಳೆಯ ಅಂಕ ಪಡೆದು ಭೇಷ್ ಅನಿಸಿಕೊಳ್ಳೊದಲ್ಲ
ಶಿಕ್ಷಣ ಸಮಾಜದ ಪ್ರಗತಿಗೆ ಆಸರೆಯಾಗಿ ನಿಲ್ಲಬೇಕು. ಅಂತಹ ಶಿಕ್ಷಣ ಮಾತ್ರ ಸುಸ್ಥಿರ ಸದೃಡ ಸಮಾಜವನ್ನ ಕಟ್ಟಬಲ್ಲುದು.
ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನ ಅವಿಷ್ಕಾರ ಮತ್ತು ಪ್ರಯೋಜನಗಳು ಬೆಳವಣಿಗೆ ಹಾದಿಯಲ್ಲಿ ದಾಪುಗಾಲು ಹಾಕುತ್ತಿವೆ. ಸಮಾಜದಲ್ಲಿ ಶೈಕ್ಷಣಿಕ ತಂತ್ರಜ್ಞಾನದ ಅವಿಷ್ಕಾರವಾದರೆ ಅದರಿಂದ ಪಡೆದ ಶಿಕ್ಷಣ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು.
ಈ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳೇ ಕೇಂದ್ರಬಿಂದು. ಶಿಕ್ಷಣದ ಮೂಲಸ್ವರೂಪ ಮಾರ್ಕ್ಸ ಕಾರ್ಡ್ ಮೇಲೆ ಅವಲಂಭಿತವಾಗಿಲ್ಲ
ಅದರ ನೈಜ ಸ್ವರೂಪ ಸ್ವಂತ ಚಿಂತನೆ , ಬದುಕಿನ ಮೌಲ್ಯಗಳು , ನೈತಿಕತೆ. ಮತ್ತು ಸ್ವಸ್ಥ ಸಮಾಜ ನಿರ್ಮಾಣ. ಶಿಕ್ಷಣವು ವಿದ್ಯಾರ್ಥಿಗಳಿಗೆ ಕೌಶಲ್ಯ ಮತ್ತು ಜ್ಞಾನ ನೀಡಿದರೆ ಅದರಿಂದ ವಿದ್ಯಾರ್ಥಿಯು ಸಮಾಜಕ್ಕೆ ಹೊಸ ಅವಿಷ್ಕಾರವನ್ನು ರೂಪಿಸಬಲ್ಲರು. ಅದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯೂ ಸಬಲವಾಗಬೇಕು. ಬಡವ ಶ್ರೀಮಂತ ಎಂಬ ಭೇದವಿಲ್ಲದ ಶಿಕ್ಷಣದಿಂದ ವಿದ್ಯಾರ್ಥಿಗಳ ಮನದಲ್ಲಿ ಏಕತೆ ಮೂಡುತ್ತದೆ. ಇಂದು ನಾವು ಸರ್ಕಾರಿ ಶಾಲೆ ಕಾಲೇಜು ಶಿಕ್ಷಣ ಮತ್ತು ಖಾಸಗಿ ಸಂಸ್ಥೆಯಿಂದ ಪಡೆಯುವ ಶಿಕ್ಷಣದಿಂದ ಸಮಾಜದ ಸ್ವಾಸ್ಥ್ಯ ಕೆಡುವುದರಲ್ಕಿ ಸಂದೇಹವೆ ಇಲ್ಲ.
