ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
15-12-2025
ಬೇಡ್ತಿ ಅಘನಾಶಿನಿ ಉಳಿಸಲು ಬೇಡಿಕೆ.
ಒಂದು ಕಡೆ ಸಹ್ಯಾದ್ರಿ ಇನ್ನೊಂದು ಕಡೆ ಕಡಲು. ಸುಂದರ ರಮಣೀಯ ಸ್ಥಾನ ಉತ್ತರಕನ್ನಡ ಜಿಲ್ಲೆ. ಹಚ್ಚ ಹಸಿರಿನಿಂದ ಕೂಡಿರುವ ಈ ಜಿಲ್ಲೆ ಅಭಿವೃದ್ಧಿಯ ಹೆಸರಿನಲ್ಲಿ ಬರಡಾಗುತ್ತಿದೆ.
ನಮ್ಮ ಜಿಲ್ಲೆಗೆ ಅಭಿವೃದ್ಧಿ ಬೇಕು ಆದರೆ ಪಶ್ಚಿಮ ಘಟ್ಟಕ್ಜೆ ನಾಶವಾಗುವಂತ ಅಭಿವೃದ್ಧಿ ಬೇಡ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಷಣಾ ಸಮಿತಿ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಶನಿವಾರ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಳ್ಳಲಾದ ಬೇಡ್ತಿ ಅಘನಾಶಿನಿ ,ಪಶ್ಚಿನಘಟ್ಟದ ನದಿ ನೀರು ತಿರುವು ಯೋಜನೆಗಳ ಜನಜಾಗೃತಿ ಚಿಂಥನ ಮಂಥನ ಕಾರ್ಯಕ್ರಮದಲ್ಲಿ ವಿಚಾರವಾದಿಗಳು ಚಿಂತಕರು ಹಾಗೂ ತಜ್ಞರು ತಮ್ಮ ಅಭಿಪ್ರಾಯ ಮಂಡಿಸಿದರು.
ಉತ್ತರ ಕನ್ನಡ ಜಿಲ್ಲೆಯ ನದಿ ನೀರನ್ನು ಸ್ಥಳೀಯವಾಗಿ ಹೇಗೆ ಉಪಯೋಗ ಮಾಡಬೇಕೆಂದು ವೈಜ್ಞಾನಿಕವಾಗಿ ಯೋಚಿಸಬೇಕು. ಎತ್ತಿನಹೊಳೆ ಯೋಜನೆ ಇದಕ್ಕೆ ಜ್ವಲಂತ ಸಾಕ್ಷಿಯಾಗಿದ್ದು ಎತ್ತಿನಹೊಳೆ ಹೂಳಿನಿಂದ ತುಂಬಿದೆ ಅದರ ನೀರು ತಲುಪಬೇಕಾದ ಜಾಗಕ್ಕೆ ತಲುಪುತ್ತಿಲ್ಲ ಎಂದರು.
ಜನವರಿ ಹನ್ನೊಂದರಂದು ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನ ಸೋಂದಾ ಮಠದ ಶ್ರೀಗಳಾದ ಗಂಗಾಧರೇಂದ್ರ ಸ್ವಾಮಿಜೀ ಪರಿಸರವಾದಿ ಸುರೇಶ ಹೆಬ್ಳಿಕರ,ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಅಶೋಕ್ ಹಾರ್ನಳ್ಳಿ ನಟ ರಾಮಕೃಷ್ಣ ನಿರ್ನಳ್ಳಿ ಉಪಸ್ಥಿತರಿದ್ದರು.
