ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
15-12-2025
ರಾಜ್ಯದಲ್ಲಿ ನಿಲ್ಲದ ಕೈ ಕುರ್ಚಿ ಕದನ
ಬೆಳಗಾವಿ ಅಧಿವವೇಶನ ಒಂದೆಡೆಯಾದರೆ ನಾಯಕದ್ವಯರ ಆಪ್ತರ ನಡುವೆ ಮೂಡಿಸಿರುವ ಗೊಂದಲ, ಕುತೂಹಲವೆಂದರೆ ರಾಜ್ಯ ರಾಜಕೀಯದಲ್ಲಿ ಗರಿಗೆದರುತ್ತಿರುವ ಸಂಗತಿ ಮುಖ್ಯಮಂತ್ರಿ ಗಾದಿಯ ಅಧಿಪತಿ.
ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಬಿದ್ದಿರುವ ಕದನದ ಚಂಡು ವಾಪಸ್ ಯಾರ ಮಡಿಲಿಗೆ ಬೀಳಲಿದೆ ಎಂಬುದೇ ಕುತೂಹಲಕ್ಕೆ ಕಾರಣ.
ಅದೇನೆ ಇರಲಿ ವಿವ ನ್ಸೂಸ್ ಈ ಸಮಸ್ಯೆಯನ್ನ ಜನತೆಯ ಮುಂದಿಟ್ಟಾಗ ಬಂದ ವೈವಿದ್ಯಮಯ ಉತ್ತರ ಹೀಗಿದೆ. ರೀ ಸ್ವಾಮಿ ಜನ ಓಟ್ ಹಾಕಿ ಆರಿಸಿ ತಂದಿದ್ದು ಇವರ ಸಿಎಮ್ ಕುರ್ಚಿ ಕಾದಾಟ ಮಾಡ್ಲಿ ಅಂತಾನಾ??
ಅಲ್ರೀ ಗ್ಯಾರಂಟಿ ಅಂತ ಆಸೆ ತೋರ್ಸಿ ಈಗ ಅವರ ಕುರ್ಚಿಗೆನೇ ಗ್ಯಾರಂಟಿ ಇಲ್ಲದಂತಾಗಿದೆ ಅಲ್ರೀ.
ಸರ್ ನಮಗೆಲ್ಲ ರಾಜಕೀಯ ಬರೋಲ್ಲ ನಮಗೆ ಬೇಕಿರೋದು ನಮ್ಮೂರಲ್ ಸರಿಯಾದ ರಸ್ತೆ ಕುಡಿಯೋಕೆ ನೀರು...
ಅಯ್ಯೋ ಬಿಡ್ರಿ ತಿಂಗಳಿಗೆ ಎರಡು ಸಾವಿರ ಬರತ್ತೆ ಅಂದ್ರು ಈಗ ಅದು ಇಲ್ಲ ಇದೂ ಇಲ್ಲ ಏನ್ ಸರ್ಕಾರಾನೋ ಏನೋ..
ಇವೆಲ್ಲ ಜನತೆಯ ಅಭಿಪ್ರಾಯ !!!!!!!!
ಸರಿ ಪುನಃ ಮತ್ತೆ ಕುರ್ಚಿ ವಿಷಯಕ್ಕೆ ಬರೋಣ
ರಾಜ್ಯ ರಾಜಕೀಯದಲ್ಲಿ ಆಡಳಿತ ಪಕ್ಷದ ಅಧಿಪತಿ ಕುರ್ಚಿಯ ಬಿಕ್ಕಟ್ಟು ಪರಿಹರಿಸುವಷ್ಟು ಸಾಧಾರಣವೇನಲ್ಲ . ಇಬ್ಬರು ದಿಗ್ಗಜ ನಾಯಕರುಗಳು ಅವರದೇ ಸಮುದಾಯ, ಪ್ರಬಲ ಬಲಾಬಲ ಹೊಂದಿರುವ ಸಿಎಮ್ ಡಿಸಿಎಮ್ ತಮ್ಮದೇ ವರ್ಚಸ್ಸನ್ನ ಹೊಂದಿದ್ದಾರೆ. ಇಬ್ಬರು ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಎರಡು ಕಣ್ಣುಗಳಿದ್ದಂತೆ.
ಹೈಕಮಾಂಡ್ ನಿರ್ಧಾರ ಮತ್ತು ನಾಯಕದ್ವಯರ ಸುತ್ತಮುತ್ತಲಿನ ವಾತಾವರಣ ಇವೆಲ್ಲವನ್ನು ಪಕ್ಕಕ್ಕಿಟ್ಟು ಪ್ರಜಾಪ್ರಭುತ್ವದ ನಿಯಮದಲ್ಲಿ ಅನುಸರಿಸುವುದಾದರೆ ಇದೊಂದು ಬಗೆಹರಿಸಲಾರದ ಸಮಸ್ಯೆಯೇನಲ್ಲ.
ಪ್ರಜಾಸತ್ತಾತ್ಮಕವಾಗಿ ನೋಡುವುದಾದರೆ ಶಾಸಕಾಂಗ ಪಕ್ಷದ ಸಭೆ ಕರೆದು ಅದರಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಯಾವ ನಾಯಕರ ಪರ ಅತೀ ಹೆಚ್ಚು ಶಾಸಕರ ಮತಗಳಿವೆಯೋ ಅವರನ್ನೇ ಆಡಳಿಯ ಅಧಿಪತಿಯನ್ನಾಗಿ ಮಾಡಬಹುದು.
ಶಾಸಕಾಂಗ ಪಕ್ಷದಲ್ಲಿ ಗೌಪ್ಯ ಮತಗಳನ್ನ ಶಾಸಕರಿಂದ ಪಡೆದಾಗ ಅತ್ತ ಶಾಸಕರ ಅಭಿಪ್ರಾಯ ನಿರುಮ್ಮಳವಾಗಿ ಪಡೆದಂತಾಗುತ್ತದಲ್ಲದೇ ಶಾಸಕರಿಗೂ ಅನಿವಾರ್ಯ ನಾಯಕರ ಮೇಲಿನ ಒತ್ತಡಗಳ ಜಂಜಾಟದಿಂದ ಮುಕ್ತರಾಗಬಹುದಲ್ಲವೇ.
ರಾಜಸ್ಥಾನದಲ್ಲಿ ಕಳೆದ ಬಾರಿ ನಡೆದ ವಿದ್ಯಮಾನ ಈಗ ಕರ್ನಾಟಕ ರಾಜ್ಯ ರಾಜಕೀಯದಲ್ಲೂ ಆವರಿಸಿದೆ.
ರಾಜಸ್ಥಾನದಲ್ಲಿ ಸಿಎಮ್ ಕುರ್ಚಿಗಾಗಿ ಇಬ್ಬರು ನಾಯದ್ವಯರ ಕಾದಾಟಕ್ಕೆ ಹೈ ಕಮಾಂಡ್ ಹೈರಾಣಾಗಿತ್ತು. ಆಗ ಅದನ್ನ ಬಗೆಹರಿಸಿದ್ದು ಈ ಪ್ರಜಾಪ್ರಭುತ್ವದ ನಿಯಮಾವಳಿಯ ಮೂಖೇನ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಡುವೆ ಏರ್ಪಟ್ಟಿದ್ದ ಸಿಎಮ್ ಕುರ್ಚಿ ಕದನ ಶಾಸಕಾಂಗ ಸಭೆಯಲ್ಲಿ ಅಂತಿಮಗೊಂಡಿತು. ಇಬ್ಬರು ನಾಯಕರುಗಳ ಜಂಗೀ ಕುಸ್ತಿಗಳಿಗೆ ಹೈಕಮಾಂಡ್ ಸಹ ಉತ್ತರಿಸಲಾಗದೇ ಕೈ ಕಟ್ಟಿ ಕುಳಿತ್ಥಿತ್ತು. ಆಗ ಶಾಸಕರ ಬಲದಿಂದ ಅಶೋಕ ಗೆಹ್ಲೋಟ್ ತಮ್ಮ ಬಲವನ್ನ ತೋರ್ಪಡಿಸಿ ಸಿಎಮ್ ಗಾದಿ ಅಲಂಕರಿಸಿದ್ದರು. ಕರ್ನಾಟಕದಲ್ಲೂ ಇದೇ ಮಾದರಿಯ ವಿದ್ಯಮಾನಗಳು ನಡೆಯುತ್ತಿದೆ. ಅದಷ್ಟು ಬೇಗ ಕುರ್ಚಿಕದನ ಬಗೆಹರಿದು ರಾಜ್ಯದ ಸಮಗ್ರ ಅಭಿವೃದ್ಧಿಯ ಕಾರ್ಯಚಟುವಟಿಕೆ ಆಗಬೇಕಿದೆ. ಗ್ಯಾರಂಟಿ ಸರ್ಕಾರದ ಯೋಜನೆಗಳು ಅನುಷ್ಠಾನವಾಗಬೇಕಾದರೆ ಕುರ್ಚಿ ಕದನಕ್ಕೆ ಶಾಶ್ವತ ವಿರಾಮ ಸಿಗಬೇಕು. ಇಲ್ಲದಿದ್ದರೆ. ಮುಂದಿನ ಅವಧಿಗೆ ರಾಜ್ಯದ ಜನತೆ ಆಡಳಿತ ಪಕ್ಷವನ್ನ ದೂರವಿಡೋದು ಗ್ಯಾರಂಟಿ.
